ಉದಯವಾಹಿನಿ , ಸಾರ್ವಕಾಲಿಕ ಹಿಟ್ ಹಾಡು ಮಾರಿ 2 ಚಿತ್ರ ರೌಡಿ ಬೇಬಿ ಹಾಡು. ಸಾಯಿ ಪಲ್ಲವಿ ಹಾಗೂ ಧನುಷ್ ಇಬ್ಬರೂ ಉತ್ತಮ ಕಲಾವಿದರ ಹೊರತಾಗಿಯೂ ಅದ್ಭುತ ನೃತ್ಯಪಟುಗಳು. ಹೀಗಾಗಿ ರೌಡಿಬೇಬಿ ಸಖತ್ ಹಿಟ್ ಆಗಿತ್ತು. ಬಳಿಕ ಯಾವುದೇ ಚಿತ್ರದಲ್ಲಿ ಜೊತೆಯಾಗಿರಲಿಲ್ಲ. ಇದೀಗ 8 ವರ್ಷದ ಬಳಿಕ ಈ ಹಿಟ್ ಜೋಡಿ ಒಂದಾಗುತ್ತಿದೆ.
ಡಿ55 ಚಿತ್ರಕ್ಕೆ ಸಾಯಿಪಲ್ಲವಿ ಆನ್‌ಬೋರ್ಡ್ ಆಗಿರುವ ವಿಚಾರವನ್ನ ಚಿತ್ರತಂಡ ಆಫಿಷಿಯಲ್ ಘೋಷಣೆ ಮಾಡಿದೆ. ಮಾರಿ2 ಬಳಿಕ ಡಿ55 ಚಿತ್ರಕ್ಕೆ ಸಾಯಿಪಲ್ಲವಿ ನಾಯಕಿ ಎಂಬ ವದಂತಿ ಹಿಂದೆಯೇ ಹಬ್ಬಿತ್ತು. ಆದರೆ ಇದೇ ಚಿತ್ರಕ್ಕೆ ಶ್ರೀಲೀಲಾ ಕೂಡ ಆಯ್ಕೆಯಾಗಿದ್ದಾರೆ. ಹೀಗಾಗಿ ಸಾಯಿಪಲ್ಲವಿ ಜಾಗವನ್ನು ಶ್ರೀಲೀಲಾ ಆಕ್ರಮಿಸಿದ್ದಾರೆ ಎಂದೇ ಊಹಿಸಲಾಗಿತ್ತು. ಆದರೆ ಇಬ್ಬರೂ ನಾಯಕಿಯರು ಅನ್ನೋದು ಇದೀಗ ರಿವೀಲ್ ಆಗಿದೆ.
ಡಿ 55 ಚಿತ್ರಕ್ಕೆ ಶ್ರೀಲೀಲಾ ಹಾಗೂ ಸಾಯಿಪಲ್ಲವಿ ಇಬ್ಬರು ನಾಯಕಿಯರು. ರಾಮಾಯಣ ಚಿತ್ರದ ಬಳಿಕ ಸಾಯಿಪಲ್ಲವಿ ಯಾವುದೇ ಚಿತ್ರ ಒಪ್ಪಿಕೊಂಡಿರಲಿಲ್ಲ. ಇದೀಗ ಧನುಷ್ ನಾಯಕರಾಗಿರುವ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಹಿಂದೆ ಈ ಜೋಡಿ ಮಧ್ಯೆ ಹಲವು ವದಂತಿಗಳಿದ್ದವು.
ಧನುಷ್ ವಿಚ್ಛೇದನದ ಸುದ್ದಿಯಲ್ಲಿ ಸಾಯಿಪಲ್ಲವಿ ಹೆಸರೂ ಕೇಳಿಬಂದಿತ್ತು. ಕಾಲಕ್ರಮೇಣ ಎಲ್ಲವೂ ತಿಳಿಯಾಗಿದೆ. ಇದೀಗ ಭರ್ತಿ 8 ವರ್ಷದ ಬಳಿಕ ಧನುಷ್ ಹಾಗೂ ಸಾಯಿಪಲ್ಲವಿ ಮತ್ತೆ ತೆರಯ ಮೇಲಿನ ಜೋಡಿಯಾಗುತ್ತಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ಹಿಂದೆ ಅಮರನ್ ಸಿನಿಮಾ ನಿದೇಶಿಸಿದ್ದ ರಾಜ್‌ಕುಮಾರ್ ಪೆರಿಯಸ್ವಾಮಿ ನಿರ್ದೇಶಕರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!