ಉದಯವಾಹಿನಿ , ಬಹು ನಿರೀಕ್ಷೆಯೊಂದಿಗೆ ಬಿಡುಗಡೆಯಾದ ದೇಶಭಕ್ತಿ ಹಿನ್ನೆಲೆಯ ‘ಬಾರ್ಡರ್ 2’ ಸಿನಿಮಾ ಆರಂಭದ ದಿನಗಳಲ್ಲಿ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆದಿತ್ತು. ಭರ್ಜರಿ ತಾರಾಗಣ, ಭಾವನಾತ್ಮಕ ಕಥಾಹಂದರ ಮತ್ತು ದೊಡ್ಡ ಮಟ್ಟದ ಪ್ರಚಾರ ಚಿತ್ರದ ಮೊದಲ ವಾರಕ್ಕೆ ಶಕ್ತಿ ನೀಡಿದವು. ಆದರೆ ದಿನಗಳು ಸಾಗುತ್ತಿದ್ದಂತೆ ಚಿತ್ರದ ಬಾಕ್ಸ್ ಆಫೀಸ್ ಓಟ ನಿಧಾನಗೊಳ್ಳತೊಡಗಿದ್ದು, 11ನೇ ದಿನಕ್ಕೆ ಸ್ಪಷ್ಟ ಕುಸಿತ ಕಂಡಿದೆ.
ಸನ್ನಿ ಡಿಯೋಲ್‌, ವರುಣ್ ಧವನ್, ಅಹಾನ್ ಶೆಟ್ಟಿ ಹಾಗೂ ದಿಲ್ಟಿತ್ ದೊಸಾಂಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಮೊದಲ ದಿನವೇ 30 ಕೋಟಿ ರೂಪಾಯಿ ಗಳಿಸಿ ಗಮನ ಸೆಳೆದಿತ್ತು. ಎರಡನೇ ದಿನ 36.5 ಕೋಟಿ, ಮೂರನೇ ದಿನ 54.5 ಕೋಟಿ ಹಾಗೂ ನಾಲ್ಕನೇ ದಿನ 59 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಈ ಭರ್ಜರಿ ಆರಂಭದ ನಂತರದಿಂದಲೇ ದಿನನಿತ್ಯದ ಗಳಿಕೆಯಲ್ಲಿ ಇಳಿಕೆ ಆರಂಭವಾಯಿತು.

Leave a Reply

Your email address will not be published. Required fields are marked *

error: Content is protected !!