ಉದಯವಾಹಿನಿ, ಬೆಂಗಳೂರು: ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷಕ್ಕೆ ಕರ್ನಾಟಕವೇ ಆರ್‌ಬಿಐ ಆಗಿದೆ. ಮುಖ್ಯಮಂತ್ರಿಗಳು ಸ್ಥಾನ ಉಳಿಸಿಕೊಳ್ಳಬೇಕಿದೆ. ಹಾಗಾಗಿ ಸಾವಿರ ಸಾವಿರ ಕೋಟಿ ಕೇಂದ್ರ ಕಾಂಗ್ರೆಸ್‌ಗೆ ಹೋಗುತ್ತಿದೆ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌  ಆರೋಪಿಸಿದ್ದಾರೆ.

ಅಬಕಾರಿ ಇಲಾಖೆ ಅವ್ಯವಹಾರದ ವಿರುದ್ಧ ‘ದೋಸ್ತಿ’ ಸಮರ ಸಾರಿದೆ. ಸದನದಲ್ಲಿ ಬಿಜೆಪಿ-ಜೆಡಿಎಸ್ ಸದಸ್ಯರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಸಚಿವ ಆರ್‌.ಬಿ ತಿಮ್ಮಾಪೂರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳ ನಾಯಕರು ಧರಣಿಗಿಳಿದಿದ್ದಾರೆ. ಸದನ ಮುಂದೂಡಿದರೂ ಹೊರಗೆ ಬರದೇ ವಿಪಕ್ಷಗಳ ಸದಸ್ಯರು ಒಳಗೆ ಉಳಿದಿದ್ದಾರೆ. ಪೋಸ್ಟರ್ ಹಿಡಿದು ಸದನದ ಬಾವಿಯಲ್ಲಿ ಧರಣಿ ಮಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ಧಿಕ್ಕಾರ, ಘೋಷಣೆ ಕೂಗಿದ್ದಾರೆ.

ಈ ಕುರಿತು ʻ ಜೊತೆಗೆ ವಿಪಕ್ಷ ನಾಯಕರು ಮಾತನಾಡಿದ್ದಾರೆ. ರಾಜ್ಯದಲ್ಲಿ ಲೂಟಿ ಸರ್ಕಾರ ಇದೆ. ರಾಜ್ಯ ಕಾಂಗ್ರೆಸ್, ಕೇಂದ್ರ ಕಾಂಗ್ರೆಸ್‌ನ ರಿಸರ್ವ್ ಬ್ಯಾಂಕ್ ಆಗಿದೆ. ಸದ್ಯದಲ್ಲೇ ಸರ್ಕಾರದಲ್ಲಿ ಸಚಿವ ಸಂಪುಟ ಪುನರ್‌ರಚನೆ ಆಗಲಿದೆ. ಮುಖ್ಯಮಂತ್ರಿಗಳು ಸ್ಥಾನ ಉಳಿಸಿಕೊಳ್ಳಬೇಕಿದೆ. ಹಾಗಾಗಿ ಸಾವಿರ ಸಾವಿರ ಕೋಟಿ ಕೇಂದ್ರ ಕಾಂಗ್ರೆಸ್‌ಗೆ ಹೋಗುತ್ತಿದೆ ಎಂದು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!