ಉದಯವಾಹಿನಿ, ವಾಷಿಂಗ್ಟನ್, ಅಮೆರಿಕ: ಅರೇಬಿಯನ್ ಸಮುದ್ರದಲ್ಲಿ ವಿಮಾನವಾಹಕ ನೌಕೆ ಯುಎಸ್ಎಸ್ ಅಬ್ರಹಾಂ ಲಿಂಕನ್ ಬಳಿಗೆ ಬರುತ್ತಿದ್ದ ಇರಾನಿನ ಡ್ರೋನ್ ಅನ್ನು ಅಮೆರಿಕ ನೌಕಾಪಡೆಯ ಯುದ್ಧ ವಿಮಾನ ಹೊಡೆದುರುಳಿಸಿದೆ. ಯುಎಸ್ ಸೆಂಟ್ರಲ್ ಕಮಾಂಡ್ ಮಂಗಳವಾರ ಈ ವಿಷಯವನ್ನು ದೃಢಪಡಿಸಿದೆ.
ಟ್ರಂಪ್ ಆಡಳಿತವು ಇರಾನ್ ಅನ್ನು ಮಾತುಕತೆಯ ಮೇಜಿಗೆ ತರಲು ಯೋಚಿಸುತ್ತಿದೆ. ಮತ್ತೊಂದು ಕಡೆ ಸಂಭಾವ್ಯ ದಾಳಿಯ ಬಗ್ಗೆಯೂ ಎಚ್ಚರಿಸಿದೆ. ಹೀಗಾಗಿ ಎರಡೂ ಕಡೆ ಉದ್ವಿಗ್ನತೆ ಉಂಟಾಗಿದೆ. ಅಂತಾರಾಷ್ಟ್ರೀಯ ಜಲ ರೇಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕ ಪಡೆಗಳು, ತನ್ನ ನೌಕೆಯ ಕಡೆ ಧಾವಿಸಿ ಬರುತ್ತಿದ್ದ ಇರಾನಿಯನ್ ಡ್ರೋನ್ ಅನ್ನು ಹೊಡೆದಿರುಳಿಸಿದೆ ಎಂದು ಸೆಂಟ್ರಲ್ ಕಮಾಂಡ್ ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಾರ್ಮುಜ್ ಜಲಸಂಧಿಯಲ್ಲಿ ಪ್ರಯಾಣಿಸುತ್ತಿದ್ದ ಅಮೆರಿಕದ ಧ್ವಜ ಹಾಗೂ ಸಿಬ್ಬಂದಿಯನ್ನು ಹೊಂದಿರುವ ವ್ಯಾಪಾರಿ ಹಡಗಿನ ಮೇಲೆ ಇರಾನಿನ ಪಡೆಗಳು ಕಿರುಕುಳ ನೀಡಿದ ಕೆಲವೇ ಗಂಟೆಗಳಲ್ಲಿ ಗುಂಡಿನ ದಾಳಿ ಸಂಭವಿಸಿದೆ ಎಂದು ಅಮೆರಿಕನ್ ಮಿಲಿಟರಿ ತಿಳಿಸಿದೆ.
ಇರಾನ್ನಲ್ಲಿ ಅಲ್ಲಿನ ಆಡಳಿತದ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ಹೆಚ್ಚುತ್ತಿವೆ. ಈ ನಡುವೆ ಈ ಪ್ರತಿಭಟನೆಗಳನ್ನು ಹತ್ತಿಕ್ಕಲು ಇರಾನ್ ಆಡಳಿತ ಕೂಡಾ ಮುಂದಾಗಿದೆ. ಪ್ರತಿಭಟನಾಕಾರರ ರಕ್ತಸಿಕ್ತ ದಾಳಿಯನ್ನ ನಿಲ್ಲಿಸದಿದ್ದರೆ ಮಿಲಿಟರಿ ಕ್ರಮ ಗೊಳ್ಳಬೇಕಾದೀತು ಎಂದು ಅಮೆರಿಕ ಇರಾನ್ ಗೆ ಎಚ್ಚರಿಕೆ ನೀಡಿದೆ. ಈ ನಡುವೆ ಟ್ರಂಪ್ ಆಡಳಿತವು ಈ ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ವಿಮಾನವಾಹಕ ನೌಕೆ, ಮಾರ್ಗದರ್ಶಿ-ಕ್ಷಿಪಣಿ ವಿಧ್ವಂಸಕಗಳು ಸೇರಿ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇರಾನ್‌ನ ದಕ್ಷಿಣ ಕರಾವಳಿಯಿಂದ ಸುಮಾರು 500 ಮೈಲಿಗಳು (800 ಕಿಲೋಮೀಟರ್) ದೂರದಲ್ಲಿ ಪ್ರಯಾಣಿಸುತ್ತಿದ್ದ ಯುಎಸ್ಎಸ್ ಲಿಂಕನ್ ನೌಕೆಯಿಂದ ನಿಂದ ಹಾರಿದ ಎಫ್-35 ಸಿ ಫೈಟರ್ ಜೆಟ್ ತನ್ನಲ್ಲಿದ್ದ ಶಹೆದ್-139 ರಿಂದ ಡ್ರೋನ್ ಹೊಡೆದುರುಳಿಸಿತು ಎಂದು ಹಾಕಿನ್ಸ್ ಮಾಹಿತಿ ನೀಡಿದ್ದಾರೆ. ಇರಾನ್‌ನ ಅರೆಸೈನಿಕ ಕ್ರಾಂತಿಕಾರಿ ಗಾರ್ಡ್ ಡ್ರೋನ್ ಅಡಚಣೆ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಇರಾನ್ ರಾಜ್ಯ ಮಾಧ್ಯಮ ವರದಿ ಮಾಡಿದೆ. ಈ ಡ್ರೋನ್ ನಾಶವಾಗುವ ಮುನ್ನ ಡ್ರೋನ್ ತಾನು ತೆಗೆದುಕೊಂಡ ಚಿತ್ರಗಳನ್ನು ಇರಾನ್‌ಗೆ ಯಶಸ್ವಿಯಾಗಿ ವರ್ಗಾಯಿಸಿದೆ ಎಂದು ಅರೆ-ಅಧಿಕೃತ ತಸ್ನಿಮ್ ಸುದ್ದಿ ಸಂಸ್ಥೆ ತನ್ನ ಟೆಲಿಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ.
