
ಉದಯವಾಹಿನಿ, ಬೀಜಿಂಗ್,: ಸಾಮಾನ್ಯವಾಗಿ ರಜಾ ದಿನದಲ್ಲಿ ರೆಸಾರ್ಟ್‌ಗೆ ಟ್ರಿಪ್ ಹೋಗುವವರು ಅನೇಕರಿದ್ದಾರೆ. ಈಜು ಕೊಳ, ಸ್ಪಾ, ಜಿಮ್ಮ ತ್ತು ಸಮುದ್ರ ವಿಹಾರದಂತ ಆಧುನಿಕ ಸೌಕರ್ಯಗಳು ಇಲ್ಲಿರುತ್ತದೆ. ಆದರೆ ಚೀನಾದ ಹಾರ್ಬಿನ್‌ನಲ್ಲಿರುವ ಈ ಒಂದು ಈಜುಕೊಳ ಇಡೀ ಜಗತ್ತಿನ ಜನರ ಗಮನ ಸೆಳೆದಿದೆ. ಚೀನಾದ ರೆಸಾರ್ಟ್ ಒಂದರಲ್ಲಿ ‘ಹಾಟ್ ಪಾಟ್ ಸ್ಪ’ ಎಂದು ಕರೆಯಲಾಗುವ ಸ್ಪಾಟ್ ಇಲ್ಲಿದ್ದು ನೀರಿನ ಒಳಗೆ ತರಕಾರಿ ಮತ್ತು ಮೆಣಸಿನಕಾಯಿ ಜತೆ ಸ್ನಾನ ಮಾಡಬಹುದು. ಇಲ್ಲಿ ಒಂದು ಬದಿಯ ನೀರು ಮೆಣಸಿನಕಾಯಿಯಿಂದ ಕೂಡಿರುವ ಕೆಂಪು ಬಣ್ಣದ್ದಾಗಿದ್ದು ಇನ್ನೊಂದು ಬದಿ ಹಾಲು ಮತ್ತು ಇತರ ತರಕಾರಿಗಳಿಂದ ತುಂಬಿದೆ. ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹಾರ್ಬಿನ್‌ನ ಮೇಪಲ್ ಲೀಫ್ ವಿಲೇಜ್ ಹಾಟ್ ಸ್ಪ್ರಿಂಗ್ ರೆಸಾರ್ಟ್ ಹೊಸ ಪ್ರಯೋಗವನ್ನು ಪರಿಚಯಿಸಿದೆ. ಇಲ್ಲಿನ ಈಜುಕೊಳವನ್ನು ನೋಡಿದರೆ ನೀವು ನಿಜಕ್ಕೂ ಶಾಕ್ ಆಗುತ್ತೀರಿ. ಈ ಕೊಳವನ್ನು ಚೀನಾದ ಸಾಂಪ್ರದಾಯಿಕ ‘ಯಿನ್-ಯಾಂಗ್’ ಹಾಟ್‌ಪಾಟ್ ಶೈಲಿಯಲ್ಲಿ ರಚನೆ ಮಾಡಲಾಗಿದೆ. ಒಂದು ಬದಿಯಲ್ಲಿ ಕೆಂಪು ಬಣ್ಣದ ನೀರು ಮತ್ತು ನೂರಾರು ಮೆಣಸಿನ ಕಾಯಿಗಳನ್ನು ಬೆರೆಸಿದ್ದರೆ ಇನ್ನೊಂದು ಬದಿಯಲ್ಲಿ ಬಿಳಿ ಬಣ್ಣದ ನೀರು ಮತ್ತು ವಿವಿಧ ತರಕಾರಿಗಳು ಇವೆ. ಆದರೆ ಈ ಮೆಣಸಿನಕಾಯಿಗಳು ಅತಿಯಾದ ಖಾರವನ್ನು ಹೊಂದಿರುವುದಿಲ್ಲ, ಆದ್ದರಿಂದ ಚರ್ಮಕ್ಕೆ ಯಾವುದೇ ತೊಂದರೆಯಿಲ್ಲ ಎಂದು ರೆಸಾರ್ಟ್ ತಿಳಿಸಿದೆ.
