
ಉದಯವಾಹಿನಿ ಕೋಲಾರ :- ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ನಗರದ ವಕೀಲರ ಭವನ ಶಾಖೆಯ ವತಿಯಿಂದ 24ನೇ ಕಾರ್ಗಿಲ್ ವಿಜಯೋತ್ಸವ ಪ್ರಯುಕ್ತ ಮಾಜಿ ಯೋಧರಾದ ಕೊಂಡರಾಜನಹಳ್ಳಿ ರಘುನಾಥ್ (ಎಂಇಜಿ) ಹಾಗೂ ವಿಟಪನಹಳ್ಳಿ ನಾರಾಯಣಸ್ವಾಮಿ (ಬಿಎಸ್‌ಎಫ್) ರವರನ್ನು ಸನ್ಮಾನಿಸಿ ಗೌರವಿಸಲಾಯಿತು.ಜೊತೆಗೆ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಯಿತು.ಇದೇ ಸಂದರ್ಭದಲ್ಲಿ ಯೋಗ ಶಿಕ್ಷಕ ಸುರೇಶಣ್ಣ ಮಾತನಾಡಿ, ಸೈನಿಕರ ತ್ಯಾಗದ ಫಲ ಹಾಗೂ ನಿಸ್ವಾರ್ಥ ಸೇವೆಯಿಂದ ದೇಶ ಸಮೃದ್ಧವಾಗಿದೆ, ದೇಶ ಅಭಿವೃದ್ಧಿಯಾಗಿ ಪ್ರಪಂಚಕ್ಕೆ ಮಾದರಿಯಾಗಬೇಕಾದರೆ ಸೈನಿಕರ ಕೊಡುಗೆ ಅಪಾರವಾಗಿದೆ ಎಂದರು.
ದೇಶದ ರಕ್ಷಣೆಗಾಗಿ ಹಗಲಿರುಳು ಗಡಿಗಳಲ್ಲಿ ಕಾಯುತ್ತಿರುವ ಸೈನಿಕರ ಸೇವೆಗೆ ಎಂದಿಗೂ ಬೆಲೆ ಕಟ್ಟಲಾಗದು, ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ದೇಶಾಭಿಮಾನ ಬೆಳೆಸಬೇಕು ಎಂದರು. ಮಾಜಿ ಯೋಧರಾದ ಕೊಂಡರಾಜನಹಳ್ಳಿ ರಘುನಾಥ್ ಹಾಗೂ ವಿಟಪನಹಳ್ಳಿ ನಾರಾಯಣಸ್ವಾಮಿ ರವರು ಮಾತನಾಡಿ ತಮ್ಮ ಸೇವಾ ಅವಧಿಯಲ್ಲಿ ನಡೆದ ಘಟನೆಗಳ ಬಗ್ಗೆ ಹಾಗೂ ಸೇನಾ ವೃತ್ತಿ ಅನುಭವವನ್ನು ವಿವರವಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ವಕೀಲರ ಭವನ ಶಾಖೆಯ ಯೋಗ ಶಿಕ್ಷಕರಾದ ಮಾರ್ಕೊಂಡಣ್ಣ ,ಶ್ರೀನಿವಾಸಣ್ಣ, ರವಿಅಣ್ಣ, ಯೋಗ ಬಂಧುಗಳಾದ ಪತ್ರಕರ್ತ ಚಂದ್ರು, ರಾಮಮೂರ್ತಿ, ಕೃಷ್ಣೇಗೌಡ, ವೆಂಕಟೇಶ್, ಉಮಾಶಂಕರ್, ಸಾಯಿ, ವೆಂಕಟ್‌ರಾಮ್, ಮಂಜಣ್ಣ, ರಾಜೇಶ್ವರಿ, ಲಕ್ಷ್ಮೀ, ಲತಾ, ಆಶಾ, ಮಮತ, ರಾಣಿ, ಸತೀನಾ ಮತ್ತಿತರರಿದ್ದರು.
