ಉದಯವಾಹಿನಿ, ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಎನ್.ಕೆ ರಾಜೇಶ್ ನಾಯ್ಡು ‘ಪರಪಂಚ’ ಚಿತ್ರ ಸೇರಿದಂತೆ ಅನೇಕ‌ ಸಿನಿಮಾಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಸಿನಿ ಜರ್ನಿ ಶುರು ಮಾಡಿದರು. ಈಗ ‘ಸುಖೀಭವʼ ಚಿತ್ರದ ಮೂಲಕ ಮೊದಲ‌ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಪ್ರತಿಭೆಗೆ ಶ್ರೀಮಂತ, ಬಡವ ಎಂಬ ಭೇದವಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಬಿ.ಎ ಓದಿರೋ ಮೈಸೂರು ಮೂಲದ ಪ್ರತಿಭೆ ಎನ್.ಕೆ ರಾಜೇಶ್ ನಾಯ್ಡು ಈಗೀನ ಕಾಲಕ್ಕೆ ತಕ್ಕಂತೆ ವಿಭಿನ್ನ ಪ್ರೇಮ ಕಥೆಯನ್ನು ಪ್ರೇಕ್ಷಕರಿಗೆ ಊಣ ಬಡಿಸಲು ಹೊರಟಿದ್ದಾರೆ. ಈ ವಿಭಿನ್ನ ಲವ್‌ಸ್ಟೋರಿಗೆ ಸುಖೀಭವ ಎಂಬ ಕ್ಯಾಚಿ ಟೈಟಲ್ ಅನ್ನೇ ಇಟ್ಟಿದ್ದಾರೆ.
ಕೆಲ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಅನುಭವಿದ್ದ ರಾಜೇಶ್‌ಗೆ ನಂತರದ ದಿನಗಳಲ್ಲಿ ನಿರ್ದೇಶಕನಾಗೋ ಆಸಕ್ತಿ ಶುರುವಾಯ್ತು. ಅದಕ್ಕಾಗಿ ಅವರು ತಾಲೀಮು ನಡೆಸಿದ್ದರು. ನಮ್ಮ ಸುತ್ತಮುತ್ತ ನಡೆಯುವ ಘಟನೆಯನ್ನೇ ಸ್ಫೂರ್ತಿಯಾಗಿಟ್ಟುಕೊಂಡು 2012ರ ಬಳಿಕ ‘ಸುಖೀಭವ’ ಕಥೆ ಬರೆದರು. ಆ ನಂತರ 2017ರ ನಂತರ ಈ ಕಥೆಯನ್ನು ಸಿನಿಮಾ ರೂಪದಲ್ಲಿ ತೋರಿಸಲು ತಯಾರಿ ನಡೆಸಿದರು. ಆಗ ಸ್ನೇಹಿತರೊಬ್ಬ ಮೂಲಕ ಪರಿಚಯವಾಗಿದ್ದ ನಿರ್ಮಾಪಕ ಸಂತೋಷ್ ಕುಮಾರ್ ರವರು ರಾಜೇಶ್ ಸಿನಿ ಕನಸಿನ ಬೆನ್ನಿಗೆ ನಿಂತರು. ಈ ಮೂಲಕ ‘ಸುಖೀಭವ’ ಕಥೆಗೆ ಜೀವ ಬಂತು ಎಂದು ರಾಜೇಶ್ ನಾಯ್ಡು ತಮ್ಮ ಸಿನಿಮಾ ಕನಸನ್ನು ಬಿಚ್ಚಿಟ್ಟಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!