
ಉದಯವಾಹಿನಿ ಮಾಲೂರು :– ಪ್ರತಿಯೊಬ್ಬರೂ ತನ್ನ ಹುಟ್ಟು ಹಬ್ಬಗಳನ್ನು ದುಂದು ವೆಚ್ಚ ಮಾಡದೇ ಸಮಾಜಮುಖಿ ಕಾರ್ಯಗಳಿಗೆ ಬಳಸುವಂತಾಗಬೇಕು. ಮಂಜುನಾಥ್ ಗೌಡ ಅವರು ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ನಮ್ಮ ಕರ್ನಾಟಕ ಸೇನೆಯ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರಾಜು ಎಂದರು. ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಕನ್ನಡ ಹೋರಾಟಗಾರ ಮಂಜುನಾಥಗೌಡ ಅವರ ಹುಟ್ಟು ಹಬ್ಬದ ಅಂಗವಾಗಿ ಹಣ್ಣು ಹಂಪಲು ವಿತರಿಸುವ ಮೂಲಕ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕನ್ನಡ ಸಂಘ ಸಂಸ್ಥೆಗಳು, ಹೋರಾಟಗಾರು, ರಾಜಕಾರಣಿಗಳು, ದಾನಿಗಳು, ತಮ್ಮ ಹುಟ್ಟು ಹಬ್ಬವನ್ನು ಸಾವಿರಾರು ರೂಗಳನ್ನು ವ್ಯಥ್ಯ ಮಾಡುತ್ತಾರೆ. ಅದರ ಬದಲು ಅನಾಥ ಆಶ್ರಮ, ಸರ್ಕಾರಿ ಶಾಲೆಗಳಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಅವಶ್ಯಕತೆ ಇರುವ ಶೈಕ್ಷಣಿಕ ಪರಿಕರಗಳನ್ನು ನೀಡಿದರೆ ಅವರ ಭವಿಷ್ಯ ಉತ್ತಮವಾಗಿರುತ್ತದೆ ಎಂದರು.ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆ ರಾಜ್ಯ ಉಪಾಧ್ಯಕ್ಷ ಚಾಕನಹಳ್ಳಿನಾಗರಾಜ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಆಂಜಿಕನ್ನಡಿಗ, ಗೌರವಾಧ್ಯಕ್ಷ ಡಿ.ಎನ್.ಗೋಪಾಲ್, ಕಾರ್ಯಾಧ್ಯಕ್ಷ ದ್ಯಾಪಸಂದ್ರ ಅಮರ್, ಆಟೋಘಟಕದ ಅಧ್ಯಕ್ಷ ಎಂ.ಜೆ.ಶ್ರೀನಿವಾಸ್, ತಾಲ್ಲೂಕು ಪ್ರದಾನಕಾರ್ಯದರ್ಶಿ ಕೆ.ಎನ್.ಜಗದೀಶ್, ಉಪಾಧ್ಯಕ್ಷ ಚನ್ನಕೃಷ್ಣ, ಖಜಾಂಚಿ ಶ್ಯಾಮ್, ಎಚ್.ವೈ.ನಾರಾಯಣಸ್ವಾಮಿ, ಶ್ರೀನಾಥ್ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.
