ಉದಯವಾಹಿನಿ, ಬೀದರ್: ಭೂಮಿಯಿಂದ ವಿಚಿತ್ರ ಶಬ್ದ ಮತ್ತು ಭೂಕಂಪನದ ಅನುಭವಕ್ಕೆ ಗ್ರಾಮಸ್ಥರು ಭಯ ಭೀತರಾದ ಘಟನೆ ಹುಮ್ನಾಬಾದ್ ತಾಲೂಕಿನ ಡಾಕುಳಗಿ ಗ್ರಾಮದಲ್ಲಿ ನಡೆದಿದೆ. ಏಕಾಏಕಿ ಇಂದು (ಫೆ.5) ಬೆಳಗಿನ ಜಾವ ವಿಚಿತ್ರ ಶಬ್ದ ಮತ್ತು ಭೂಮಿ ನಡುಗಿದ ಅನುಭವವಾಗಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಕೆಲವು ಗಂಟೆಗಳ ಕಾಲ ಮನೆಯ ಮುಂದಿನ ರಸ್ತೆಗಳಿಗೆ ಜಮಾಯಿಸಿದ್ದಾರೆ. ಭೂಕಂಪನದ ಭಯಕ್ಕೆ ಮನೆಯ ಒಳಗಡೆ ಹೋಗಲು ಗ್ರಾಮಸ್ಥರು ಭಯ ಬಿದ್ದಿದ್ದಾರೆ.
ಅಧಿಕಾರಿಗಳು ಅಭಯ ನೀಡಿದ ಬಳಿಕ ಗ್ರಾಮಸ್ಥರು ಆತಂಕದಿಂದ ಹೊರ ಬಂದಿದ್ದಾರೆ. ಹಲವು ದಿನಗಳ ಹಿಂದೆ ಖೇಣಿರಂಜೋಳ ಗ್ರಾಪಂ ವ್ಯಾಪ್ತಿಯ ಎರಡು ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿತ್ತು.
