ಉದಯವಾಹಿನಿ , ಬೆಂಗಳೂರು: ರಾಜ್ಯದಲ್ಲಿ ಸರ್ಕಾರದ ಜಾಗ ಕಾಂಗ್ರೆಸ್ ಪಕ್ಷದ ಪಾಲಾಗ್ತಿದೆ. ನಗರಾಭಿವೃದ್ಧಿ ಪ್ರಾಧಿಕಾರಿಗಳು ಬಡಾವಣೆಗಳಲ್ಲಿ ಸಾರ್ವಜನಿಕ ಸೌಕರ್ಯಗಳಿಗೆಂದು ಮೀಸಲಿಡುವ ಕೋಟಿ ಕೋಟಿ ಬೆಲೆ ಬಾಳೋ ಸಿಎ ಸೈಟ್ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸರ್ಕಾರ ಹಂಚಿಕೆ ಮಾಡ್ತಿದೆ. ಹೌದು. ಪ್ರತಿ ತಾಲೂಕಿನಲ್ಲಿ ಕಾಂಗ್ರೆಸ್ ಭವನಕ್ಕೆ ಮುಂದಾಗಿರೋ ಕೆಪಿಸಿಸಿಗೆ ಈ ಜಾಗವನ್ನ ಪೌರಾಡಳಿತ ಇಲಾಖೆ ಕೊಟ್ಟಿದೆ. ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯ ಚಿದಾನಂದಗೌಡ ಪ್ರಶ್ನೆಗೆ ಈ ಬಗ್ಗೆ ಪೌರಾಡಳಿತ ಇಲಾಖೆ ಸಚಿವ ರಹೀಂ ಖಾನ್ ಲಿಖಿತ ಉತ್ತರ ಕೊಟ್ಟಿದ್ದಾರೆ.
ಇನ್ನೂ 13 ಜಿಲ್ಲೆಗಳಲ್ಲಿ ಪುರಸಭೆ, ನಗರ ಸಭೆಗಳ ಜಾಗವನ್ನ ಕಾಂಗ್ರೆಸ್ ಭವನ ಕಟ್ಟಲು ಕೊಟ್ಟಿರೋ ಪೌರಾಡಳಿತ ಇಲಾಖೆ ಕೊಟ್ಟಿದೆ. ಕಾನೂನು ಇಲಾಖೆ ವಿರೋಧದ ನಡುವೆಯೂ ಕಾಂಗ್ರೆಸ್ ಭವನಕ್ಕೆ ಜಾಗ ಕೊಟ್ಟಿರೋ ಬಗ್ಗೆಯೂ ಆರೋಪ ಇದೆ. ಸರ್ಕಾರದ ಕ್ರಮವನ್ನ ಗೃಹ ಸಚಿವ ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್ ಭವನಕ್ಕೆ ರಿಯಾಯ್ತಿ ದರದಲ್ಲಿ ನೀಡಿರೋ ನಿವೇಶನಗಳ ಎಕ್ಸ್‌ಕ್ಲೂಸಿವ್ ದಾಖಲೆ ಸಿಕ್ಕಿದೆ.
