
ಉದಯವಾಹಿನಿ, ಔರಾದ್ : ಸೈನಿಕರ ತ್ಯಾಗದ ಫಲ ಹಾಗೂ ನಿಸ್ವಾರ್ಥ ಸೇವೆಯಿಂದ ದೇಶ ಸಮೃದ್ಧವಾಗಿದೆ ಕಾರ್ಗಿಲನಲ್ಲಿ ಹುತಾತ್ಮರಾದ ಯೋಧರ ಬದುಕು ಎಲ್ಲರಿಗೂ ಮಾದರಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಶಾಲಿವಾನ ಉದಗಿರೆ ಹೇಳಿದರು. ಪಟ್ಟಣದ ಅಮರೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಿದ ಕಾರ್ಗಿಲ್ ವಿಜಯೋತ್ಸವ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
1999 ಮೇ ದಿಂದ ಪ್ರಾರಂಭವಾದ ಕಾರ್ಗಿಲ್ ಯುದ್ಧವು ಜುಲೈ 26 ರವರೆಗೆ ನಿರಂತರ ನಡೆದ ಯುದ್ಧ ಭೂಮಿಯಲ್ಲಿ ನಮ್ಮ ಹೆಮ್ಮೆಯ ನೂರಾರು ಸೈನಿಕರ ಬಲಿದಾನವಾದರೂ, ಸಾವಿರಾರು ಸೈನಿಕರು ಯುದ್ಧಭೂಮಿಯಲ್ಲಿ ಅಂಗಾಂಗಗಳನ್ನು ಕಳೆದುಕೊಳ್ಳುವುದರ ಮೂಲಕ ಪಾಕಿಸ್ತಾನದ ಸೈನಿಕರನ್ನು ಸೆದೆ ಪಡೆದು ಕಾರ್ಗಿಲನ ಟೈಗರ್ ಹಿಲ್ ಮೇಲೆ ತ್ರಿವರ್ಣ ಧ್ವಜ ಹರಿಸುವುದರ ಮೂಲಕ ವಿಜಯ ಪತಾಕೆಯನ್ನು ಹಾರಿಸಿದ ದಿನವೇ ಕಾರ್ಗಿಲ್ ವಿಜಯೋತ್ಸವ ದಿನವಾಗಿದೆ ಎಂದು ಹೇಳಿದರು. ಪ್ರಾಂಶುಪಾಲ ರೇವಣಯ್ಯ ಮಠ ಮಾತನಾಡಿ, ವಿದ್ಯಾರ್ಥಿಗಳು ದೇಶಭಕ್ತಿ ಹಾಗೂ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಶಾಂತಕುಮಾರ ಸಂಗೊಳ್ಳಗೆ ಪ್ರಾಸ್ತಾವಿಕ ಮಾತನಾಡಿದರು.ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಮಾಜಿ ಸೈನಿಕ ರಾಜಕುಮಾರ ನಾಯಕವಾಡೆ ಗೌರವಿಸಿ ಸನ್ಮಾನಿಸಲಾಯಿತು.
ಎಬಿವಿಪಿ ಕಾರ್ಯದರ್ಶಿ ಶಶಿಕಾಂತ ರ‍್ಯಾಕಲೆ, ಅಶೋಕ ಶಂಬೆಳೆ, ಅಂಬಾದಾಸ ನಳಗೆ, ಅನಿಲ ಮೇತ್ರೆ, ಧನರಾಜ ಬಲ್ಲೂರ, ಮಲ್ಲಿಕಾರ್ಜುನ ಟೆಕರಾಜ ಸೇರಿದಂತೆ ವಿಧ್ಯಾರ್ಥಿಗಳು ಇದ್ದರು.
