ಉದಯವಾಹಿನಿ,ಚಿಂಚೋಳಿ: ಅವಳಿ ಪಟ್ಟಣಗಳಾದ ಚಿಂಚೋಳಿ ಮತ್ತು ಚಂದಾಪೂರ ಸಾರ್ವಜನಿಕರು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಸದ್ಬಳಕೆ ಮಾಡಿಕೊಳ್ಳಲು ಫಲಾನುಭವಿಗಳು ಅನ್ಲೈನ್ ನೋಂದಣಿ ಮಾಡಲು ವಾರ್ಡ್ ಸಂಖ್ಯೆಯ ಅನುಗುಣವಾಗಿ ಕೇಂದ್ರಗಳು ಪ್ರಾರಂಭಿಸಲಾಗಿದೆ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಈಗಾಗಲೇ ಪುರಸಭೆ ಕಛೇರಿಯಲ್ಲಿ ವಾರ್ಡ್ ನಂ.1 ರಿಂದ 7ರವರೆಗೆ ನೋಂದಣಿ ಮಾಡಲು ಪ್ರಾರಂಭವಾಗಿದ್ದು,ವಾರ್ಡ್ ನಂ.8 ರಿಂದ 14ರವರೆಗೆ ನೂತನ ಪುರಸಭೆ ಕಟ್ಟಡ ಬೀದರ್ ವೃತ್ತದ ಹತ್ತಿರ ಅನ್ಲೈನ್ ಕೇಂದ್ರ ತೆರೆಯಲಾಗಿದೆ. ವಾರ್ಡ್ ನಂ.15ರಿಂದ 23ರವರೆಗೆ ಚಂದಾಪೂರ ಪಟ್ಟಣದ ಗಾಂಧಿ ವೃತ್ತ ಪುರಸಭೆ ಮಳಿಗೆಯಲ್ಲಿ ಆನ್ಲೈನ್ ಕೇಂದ್ರ ಮಾಡಲಾಗಿದ್ದು ಸಾರ್ವಜನಿಕರು ಬೆಳಿಗ್ಗೆ 9 ರಿಂದ ಸಾಯಂಕಾಲ 6ಗಂಟೆಯವರೆಗೆ ಉಚಿತವಾಗಿ ನೋಂದಣಿ ರವಿವಾರ ಹೊರತುಪಡಿಸಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
