ಉದಯವಾಹಿನಿ, ದುಬೈ: ಟೆಹ್ರಾನ್​ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಇದೀಗ ಯುಎಸ್​ ಮತ್ತು ಇರಾನ್​ ಮಾತುಕತೆಗೆ ಮುಂದಾಗಿದ್ದು, ಓಮನ್​ನಲ್ಲಿ ಈ ಸಭೆ ನಡೆಸಲಾಗುವುದು ಎಂದು ಇರಾನಿನ ವಿದೇಶಾಂಗ ಸಚಿವರು ತಿಳಿಸಿದ್ದಾರೆ.
ನಿರೀಕ್ಷಿತ ಮಾತುಕತೆಗಳು ವಿಫಲವಾಗುತ್ತಿವೆ ಎಂಬ ಸೂಚನೆ ನಡುವೆ​ ವಿದೇಶಾಂಗ ಸಚಿವ ಅಬ್ಬಾಸ್​ ಅರಾಘ್ಚಿ ಈ ಘೋಷಣೆ ಹೊರಬಿದ್ದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆಗೆ ಮುಂಚಿತವಾಗಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಗೆ ಸ್ಪಷ್ಟ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ಎನ್​ಬಿಸಿ ನ್ಯೂಸ್​ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್​, ಅವರು ತುಂಬಾ ಚಿಂತಿತರಾಗಬೇಕು ಎಂದು ಖಮೇನಿ ಉದ್ದೇಶಿಸಿ ಹೇಳಿದ್ದರು. ಇಸ್ತಾಂಬುಲ್​ ನಲ್ಲಿ ಈ ದೇಶಗಳು ಭಾಗಿಯಾಗುವ ಮಾತುಕತೆಗಳನ್ನು ಆಯೋಜಿಸಲು ಟರ್ಕಿ ತೆರೆಮರೆಯಲ್ಲಿ ಕೆಲಸ ಮಾಡುತ್ತಿತ್ತು. ಮಾತುಕತೆ ಮುಖ್ಯವಾಗಿ ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮ ಮತ್ತು ಇತರ ಕಳವಳಕಾರಿ ವಿಷಯಗಳ ಮೇಲೆ ಕೇಂದ್ರೀಕರಿಸಿದೆ. ಕಳೆದ ವರ್ಷ ಕೂಡ ಇದೆ ರೀತಿಯ ಮಾತುಕತೆ ಓಮನ್​ನಲ್ಲಿ ಆಯೋಜನೆಯಾಗಿತ್ತು.

ಈ ಬಾರಿಯ ಮಾತುಕತೆ ಕೂಡ ಓಮನ್​ನಲ್ಲಿ ನಡೆಯಲಿದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಶ್ವೇತಭವನದ ಅಧಿಕಾರಿಯೊಬ್ಬರು ಧೃಢಪಡಿಸಿದ್ದಾರೆ. ಇರಾನಿನ ಅಧಿಕಾರಿಗಳು ತಮ್ಮ ವ್ಯಾಪ್ತಿಯನ್ನು ಸಂಕುಚಿತಗೊಳಿಸಲು ಒತ್ತಾಯಿಸಿದರೂ, ಹಲವಾರು ಅರಬ್ ಮತ್ತು ಮುಸ್ಲಿಂ ನಾಯಕರು ಟ್ರಂಪ್ ಆಡಳಿತವನ್ನು ಮಾತುಕತೆಯಿಂದ ಹಿಂದೆ ಸರಿಯದಂತೆ ಒತ್ತಾಯಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮಾತುಕತೆ ಮಾತುಕತೆ ಯಶಸ್ವಿಯಾಗುತ್ತದೆಯೇ ಎಂಬುದರ ಬಗ್ಗೆ ಶ್ವೇತಭವನವು ಸಹ ಸ್ವತಃ ಸಂದೇಹ ಹೊಂದಿದೆ. ಆದರೆ ಈ ಪ್ರದೇಶದ ಮಿತ್ರರಾಷ್ಟ್ರಗಳಿಗೆ ಗೌರವ ನೀಡುವ ಸಲುವಾಗಿ ಯೋಜನೆಗಳಲ್ಲಿನ ಬದಲಾವಣೆಯೊಂದಿಗೆ ಮುಂದುವರಿಯಲು ಒಪ್ಪಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.ಟೆಹ್ರಾನ್ ಜೊತೆಗಿನ ಹಿಂದಿನ ಪರಮಾಣು ಮಾತುಕತೆಗಳಲ್ಲಿ ಭಾಗಿಯಾಗಿದ್ದ ಅಮೆರಿಕದ ಮಾಜಿ ರಾಜತಾಂತ್ರಿಕ ಅಲನ್ ಐರ್ ಈ ಬಾರಿ ಮಾತುಕತೆ ಯಶಸ್ವಿಯಾಗುವ ಬಗ್ಗೆ ಇದೇ ರೀತಿಯ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.ಇರಾನ್‌ನ ಸುಧಾರಣಾವಾದಿ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಮಂಗಳವಾರ ವಿದೇಶಾಂಗ ಸಚಿವರಿಗೆ ಅಮೆರಿಕದೊಂದಿಗೆ ನ್ಯಾಯಯುತ ಮತ್ತು ಸಮಾನ ಮಾತುಕತೆಗಳನ್ನು ಮುಂದುವರಿಸಲು ಸೂಚನೆ ನೀಡಿದ್ದೇನೆ. ಟೆಹ್ರಾನ್‌ನಿಂದ ಬಂದ ಮೊದಲ ಸ್ಪಷ್ಟ ಸೂಚನೆಯಲ್ಲಿ ಮಾತುಕತೆಗೆ ಒತ್ತಾಯಿಸಿದೆ. ಈ ಕ್ರಮವನ್ನು ಇರಾನ್​ ನಾಯಕ ಅಯತೊಲ್ಲಾ ಅಲಿ ಖಮೇನಿ ಬೆಂಬಲಿಸುತ್ತಾರೆ ಎಂದು ಸುಳಿವು ನೀಡಿದ್ದಾರೆ. ಅವರು ರಾಜ್ಯದ ಎಲ್ಲಾ ವಿಷಯಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!