ಉದಯವಾಹಿನಿ, ಟ್ರಿಪೋಲಿ: ಲಿಬಿಯಾದ ಮಾಜಿ ನಾಯಕ ಮುಅಮ್ಮರ್ ಮುಹಮ್ಮದ್ ಅಬು ಮಿನ್ಯಾರ್ ಅಲ್-ಗದಾಫಿ ಅವರ ಪುತ್ರ ಸೈಫ್ ಅಲ್-ಇಸ್ಲಾಂ ಗದಾಫಿ ಅವರನ್ನು ಜಿಂಟಾನ್ ಪಟ್ಟಣದಲ್ಲಿರುವ ಅವರ ನಿವಾಸದಲ್ಲಿ ಮುಸುಕುಧಾರಿಗಳು ನುಗ್ಗಿ ಹತ್ಯೆಗೈದಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿದ್ದಾಗಿ ವರದಿ ಮಾಡಿದೆ.
ಗದಾಫಿ ಅವರ ವಕೀಲ ಖಲೀದ್ ಅಲ್-ಝದಿ ಹಾಗೂ ರಾಜಕೀಯ ಸಲಹೆಗಾರ ಅಬ್ದುಲ್ಲಾ ಉಸ್ಮಾನ್ ಸಾಮಾಜಿಕ ಜಾಲತಾಣಗಳ ಮೂಲಕ ಸಾವಿನ ಮಾಹಿತಿಯನ್ನು ದೃಢಪಡಿಸಿದ್ದಾರೆ. ಟ್ರಿಪೋಲಿಯಿಂದ ಸುಮಾರು 136 ಕಿ.ಮೀ ದೂರದಲ್ಲಿರುವ ಜಿಂಟಾನ್‌ನಲ್ಲಿನ ಮನೆಯಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ದಾಳಿ ನಡೆಸಿದ್ದು, ಭದ್ರತಾ ಕ್ಯಾಮೆರಾಗಳನ್ನು ಮುಚ್ಚಿ ಸಾಕ್ಷ್ಯಗಳನ್ನು ಅಳಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಕೃತ್ಯವನ್ನು ಗದಾಫಿ ಅವರ ರಾಜಕೀಯ ತಂಡ “ಹೇಡಿತನ ಮತ್ತು ವಿಶ್ವಾಸಘಾತುಕ ಹತ್ಯೆ” ಎಂದು ಆರೋಪಿಸಿದೆ.

Leave a Reply

Your email address will not be published. Required fields are marked *

error: Content is protected !!