ಉದಯವಾಹಿನಿ,: ಹಲ್ವಾ ಎಂದ ತಕ್ಷಣ ನಮಗೆ ನೆನಪಿಗೆ ಬರೋದೇ ರವೆ, ಬೀಟ್ರೂಟ್ ಅಥವಾ ಕ್ಯಾರೆಟ್ (Carrot) ಹಲ್ವಾ. ಇವು ಎಷ್ಟೇ ರುಚಿಕರವಾಗಿದ್ದರೂ, ಕೆಲವೊಮ್ಮೆ ಬೋರ್ ಅನಿಸಬಹುದು. ಇಂತಹ ಸಮಯದಲ್ಲಿ ನೀವು ವಿಭಿನ್ನ ಟೇಸ್ಟ್​ ನೀಡುವ ಯಾವುದಾದರೂ ಆರೋಗ್ಯಕರ ಆಹಾರ ಸೇವಿಸಲು ಬಯಸುವುದಾದರೆ ಪಪ್ಪಾಯಿ ಹಲ್ವಾವನ್ನು ಟ್ರೈ ಮಾಡಬಹುದು. ಈ ಹಲ್ವಾ ಸಖತ್ ಟೇಸ್ಟಿ ಆಗಿರುವುದರೊಂದಿಗೆ ಹೆಲ್ದಿ ಸಹ ಆಗಿದೆ.
ಈ ಹಸಿರು ಪಪ್ಪಾಯಿಯಲ್ಲಿ ಫೈಬರ್, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳು ಲಭ್ಯವಿದೆ. ಇವು ದೇಹಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಶುದ್ಧ ತುಪ್ಪ, ಹಾಲು ಮತ್ತು ಡ್ರೈ ಫ್ರೂಟ್ಸ್​ ಬಳಸುವುದರಿಂದ ಹಲ್ವಾದ ರುಚಿ ಮತ್ತಷ್ಟು ಹೆಚ್ಚುತ್ತದೆ. ಹಾಗಾದ್ರೆ ಇನ್ನೇಕೆ ತಡ ಹಲ್ವಾ ತಯಾರಿಸುವುದು ಹೇಗೆಂದು ನೋಡೋಣ ಬನ್ನಿ.

ಸಿಪ್ಪೆ ಸುಲಿದು ತುರಿದ ಪಪ್ಪಾಯಿ – 1
ತುಪ್ಪ – 4 ಚಮಚ
ಸಕ್ಕರೆ – ಅರ್ಧ ಕಪ್ (ರುಚಿಗೆ ಅನುಗುಣವಾಗಿ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು)
ಹಾಲು – 1 ಕಪ್
ಏಲಕ್ಕಿ ಪುಡಿ – ಅರ್ಧ ಚಮಚ
ಡ್ರೈ ಫ್ರೂಟ್ಸ್ – 2 ಚಮಚ (ಗೋಡಂಬಿ, ಬಾದಾಮಿ, ಪಿಸ್ತಾ)
ಕೇಸರಿ ಅಥವಾ ರೋಸ್ ವಾಟರ್ – ಸ್ವಲ್ಪ

ಮೊದಲು ಪಪ್ಪಾಯಿಯನ್ನು ತೊಳೆದು ಸಿಪ್ಪೆ ತೆಗೆಯಿರಿ. ಹಲ್ವಾ ಮೃದುವಾಗಿರಲು ಒರಟು ಸಿಪ್ಪೆಗಳು ಕೊಂಚವೂ ಇರದಂತೆ ಕತ್ತರಿಸಲು ಪ್ರಯತ್ನಿಸಿ.
ಈಗ ಒಲೆಯ ಮೇಲೆ ಪ್ಯಾನ್ ಇಟ್ಟು, ಒಂದು ಚಮಚ ತುಪ್ಪ ಸೇರಿಸಿ, ಗೋಡಂಬಿ ಮತ್ತು ಬಾದಾಮಿಯನ್ನು ಹಾಕಿ, ಇವು ತಿಳಿ ಗೋಲ್ಡನ್ ಬ್ರೌನ್ ಬರುವವರೆಗೆ ಹುರಿಯಿರಿ.
ಈಗ ಅದೇ ಪ್ಯಾನ್‌ಗೆ ಉಳಿದ ತುಪ್ಪವನ್ನು ಸೇರಿಸಿ. ತುಪ್ಪ ಬಿಸಿಯಾದ ನಂತರ, ತುರಿದ ಪಪ್ಪಾಯಿಯನ್ನು ಸೇರಿಸಿ. ಮಧ್ಯಮ ಉರಿಯಲ್ಲಿ ಸುಮಾರು 10 ನಿಮಿಷಗಳ ಕಾಲ ಹುರಿಯಿರಿ. ಇದು ಹಸಿ ವಾಸನೆಯನ್ನು ಹೋಗಲಾಡಿಸುತ್ತದೆ ಮತ್ತು ಬಣ್ಣವನ್ನು ಸ್ವಲ್ಪ ಬದಲಾಯಿಸುತ್ತದೆ.
ಈಗ ಇದಕ್ಕೆ ಹಾಲು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಪ್ಯಾನ್ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಲು ಬಿಡಿ. ಈ ಹಲ್ವಾ ತಳಕ್ಕೆ ಅಂಟಿಕೊಳ್ಳದಂತೆ ಪದೇ-ಪದೇ ಬೆರೆಸುತ್ತೀರಿ.
ಸುಮಾರು 10 ನಿಮಿಷಗಳ ನಂತರ ಪಪ್ಪಾಯಿ ಮೃದುವಾದಾಗ, ಸಕ್ಕರೆ ಸೇರಿಸಿ. ಮುಚ್ಚಳ ತೆಗೆದು ಬೆರೆಸಿ. ಸಕ್ಕರೆ ಕರಗಿದ ನಂತರ ಹಲ್ವಾ ಸ್ವಲ್ಪ ಸಡಿಲವಾಗಿ ಕಾಣುತ್ತದೆ. ಆದರೆ ಕ್ರಮೇಣ ಇದು ಗಟ್ಟಿ ಆಗುತ್ತದೆ.
ಈ ಮಿಶ್ರಣವು ಗಟ್ಟಿಯಾದ ನಂತರ ಮತ್ತು ತುಪ್ಪ ಬೇರ್ಪಡಲು ಪ್ರಾರಂಭಿಸಿದ ನಂತರ, ಏಲಕ್ಕಿ ಪುಡಿ ಮತ್ತು ಹುರಿದ ಒಣ ಹಣ್ಣುಗಳನ್ನು ಸೇರಿಸಿ. ಸ್ವಲ್ಪ ಪರಿಮಳ ಬರಲು ಪ್ರಾರಂಭಿಸಿದಾಗ, ಹಲ್ವಾ ಸಿದ್ಧವಾಗಿದೆ ಎಂದರ್ಥ.

Leave a Reply

Your email address will not be published. Required fields are marked *

error: Content is protected !!