ಉದಯವಾಹಿನಿ,: ದಹಿ ಪಾಪ್ಡಿ ಚಾಟ್ .. ಸಾಮಾನ್ಯವಾಗಿ ಚಿಕ್ಕವರಿಂದ ಹಿಡಿದೂ ದೊಡ್ಡವರವರೆಗೂ ಎಲ್ಲರೂ ಇಷ್ಟಪಟ್ಟು ಸವಿಯುವ ಸ್ನ್ಯಾಕ್ಸ್ ಕ್ರಿಸ್ಪಿ ಪಾಪ್ಡಿ , ತಣ್ಣನೆಯ ಮೊಸರು ( ಸಿಹಿ ಮತ್ತು ಹುಳಿ ಚಟ್ನಿ, ಸ್ವಲ್ಪ ಮಸಾಲೆ ಈ ಎಲ್ಲದರ ಕಾಂಬಿನೇಷನ್ ಬಾಯಲ್ಲಿ ನೀರೂರಿಸುತ್ತದೆ. ಚಾಟ್ ಅಂಗಡಿಗಳಲ್ಲಿ ಸಿಗುವ ರುಚಿಯಂತೆಯೇ ಮನೆಯಲ್ಲಿಯೇ ನೀವು ಇದನ್ನು ತಯಾರಿಸಬಹುದಾಗಿದೆ. ಹಾಗಾದ್ರೆ ದಹಿ ಪಾಪ್ಡಿ ಚಾಟ್ ತಯಾರಿಸುವುದು ಹೇಗೆಂದು ನೋಡೋಣ ಬನ್ನಿ.
ಮೈದಾ – 1 ಕಪ್
ರವೆ – 2 ಚಮಚ
ಅಜ್ವೈನ್ – ½ ಟೀಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಬೆರೆಸಲು + ಹುರಿಯಲು
ಮಸಾಲೆ ತಯಾರಿಸಲು ಬೇಕಾಗುವ ಪದಾರ್ಥಗಳು!
ಮೊಸರು – 1.5 ಕಪ್ (ತುರಿದ)
ಸಕ್ಕರೆ – 1-2 ಚಮಚ (ಮೊಸರಿನಲ್ಲಿ ಬೆರೆಸಲು)
ಬೇಯಿಸಿ ಕತ್ತರಿಸಿದ ಆಲೂಗಡ್ಡೆ – 1
ಹಸಿರು ಬಟಾಣಿ – ಸ್ವಲ್ಪ
ಚಟ್ನಿ – 1/2 ಕಪ್
ಗಟ್ಟಿ ಹುಣಸೆ ಚಟ್ನಿ – ಸ್ವಲ್ಪ
ಹಸಿರು ಕೊತ್ತಂಬರಿ ಚಟ್ನಿ – ಸ್ವಲ್ಪ
ಕೆಂಪು ಮೆಣಸಿನ ಪುಡಿ – ಅಗತ್ಯಕ್ಕೆ ತಕ್ಕಷ್ಟು
ಹುರಿದ ಜೀರಿಗೆ ಪುಡಿ – ಸ್ವಲ್ಪ
ಚಾಟ್ ಮಸಾಲ – ಸ್ವಲ್ಪ
ಬ್ಲ್ಯಾಕ್ ಸಾಲ್ಟ್ – ರುಚಿಗೆ ತಕ್ಕಷ್ಟು
ದಾಳಿಂಬೆ ಬೀಜಗಳು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
