ಉದಯವಾಹಿನಿ, ನವದೆಹಲಿ: ದೇಶದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಹೋಗಲಾಡಿಸಲು ಆತ್ಮಸ್ಥೈರ್ಯ ತುಂಬಿಸುವ ಸಲುವಾಗಿ ಪ್ರತಿವರ್ಷ ʻಪರೀಕ್ಷಾ ಪೇ ಚರ್ಚಾʼ ಕಾರ್ಯಕ್ರಮ ನಡೆಯುತ್ತಿದೆ. ಇಂದು 9ನೇ ಪರೀಕ್ಷಾ ಪೇ ಚರ್ಚಾ ಅಂಗವಾಗಿ ಪ್ರಧಾನಿ ಮೋದಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.
ಮಕ್ಕಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಲು ಆತ್ಮಸ್ಥೈರ್ಯ ತುಂಬಿಸುವ ಸಲುವಾಗಿ ಪ್ರತಿವರ್ಷ ಪ್ರಧಾನಿ ನರೇಂದ್ರ ಮೋದಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಡಿ ಸಂವಾದ ಕಾರ್ಯಕ್ರಮ ನಡೆಸುತ್ತಾರೆ. ಈ ವರ್ಷವೂ ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಗುಜರಾತ್ ನ ದೇವಮೋಗ್ರ, ತಮಿಳುನಾಡಿನ ಕೊಯಮತ್ತೂರು, ಛತ್ತೀಸ್‌ಗಢನ ರಾಯಪುರ ಸೇರಿದಂತೆ ವಿವಿಧ ಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಆತ್ಮ ವಿಶ್ವಾಸ ತುಂಬಲು, ಪರೀಕ್ಷೆ ಭಯ, ಒತ್ತಡ ನಿವಾರಣೆ ಕಲಿಕೆಗೆ ಸಂಬಂಧಿಸಿದ ವಿಚಾರ ಶಿಕ್ಷಣಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಪ್ರಧಾನಿ ಮೋದಿ ವಿದ್ಯಾರ್ಥಿಗಳ ಜೊತೆ ಚರ್ಚೆ ನಡೆಸಿದರು.
