ಉದಯವಾಹಿನಿ, ಗುಜರಾತ್ ಟೈಟಾನ್ಸ್ ವಿರುದ್ಧದ ಭರ್ಜರಿ ಗೆಲುವಿನ ಬಳಿಕ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ತಂಡದ ಸಮೂಹ ಪ್ರದರ್ಶನವನ್ನು ಮೆಚ್ಚಿಕೊಂಡಿದ್ದಾರೆ. ವಿಶೇಷವಾಗಿ ವೇಗಿಗಳ ನಿಖರ ಬೌಲಿಂಗ್ ಪಂದ್ಯದಲ್ಲಿ ದೊಡ್ಡ ತಿರುವು ತಂದಿತು ಎಂದು ಅವರು ಹೇಳಿದ್ದಾರೆ.
ಆರಂಭದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಹೇಜಲ್‌ವುಡ್ ಉತ್ತಮ ನಿಯಂತ್ರಣ ತೋರಿದರು. ಮಧ್ಯಮ ಓವರ್‌ಗಳಲ್ಲಿ ಸುಯಶ್ ಶರ್ಮಾ ರನ್ ವೇಗ ತಗ್ಗಿಸಿದರು. ಡೆತ್ ಓವರ್‌ಗಳಲ್ಲಿ ನಿಖರ ಯಾರ್ಕ‌್ರಗಳ ಮೂಲಕ ಎದುರಾಳಿಯನ್ನು ನಿಯಂತ್ರಣದಲ್ಲಿಟ್ಟದ್ದು ಗೆಲುವಿಗೆ ಕಾರಣವಾಯಿತು ಎಂದು ಪಾಟಿದಾರ್ ಹೇಳಿದರು.
