ಉದಯವಾಹಿನಿ, ಜೈಪುರ: ಮೇಘಾಲಯದ ಹನಿಮೂನ್‌ ಮರ್ಡರ್‌ ಕೊಲೆ ಪ್ರಕರಣವನ್ನು ನೆನಪಿಸುವ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ. ಪತ್ನಿ ಪ್ಲ್ಯಾನ್‌ ಮಾಡಿದ್ದ ಹಿಟ್‌ & ರನ್‌ಗೆ ಆಕೆಯ ಪತಿ ಬಲಿಯಾಗಿದ್ದಾರೆ. ಆಶಿಶ್‌ ಮತ್ತು ಅಂಜು ನವವಿವಾಹಿತ ಜೋಡಿ. ಇಬ್ಬರೂ ನಡೆದುಕೊಂಡು ಹೋಗುತ್ತಿದ್ದಾಗ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಆಶಿಶ್‌ ಸ್ಥಳದಲ್ಲೇ ಸಾವನ್ನಪ್ಪಿದರೆ, ಅಂಜು ಚಿನ್ನಾಭರಣವನ್ನು ಆರೋಪಿಗಳು ದೋಚಿ ಪರಾರಿಯಾಗಿದ್ದರು. ಅಂಜು ರಸ್ತೆಯಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ಪ್ರಕರಣ ತನಿಖೆ ನಡೆಸಿದ ಪೊಲೀಸರು ಕೊನೆಗೆ ಶಾಕ್‌ ಆಗಿದ್ದಾರೆ.

ಪೊಲೀಸ್ ತನಿಖೆಯಲ್ಲಿ, ಅಂಜು ತನ್ನ ಗೆಳೆಯ ಸಂಜು ಮತ್ತು ಇನ್ನಿಬ್ಬರು ವ್ಯಕ್ತಿಗಳು ಸೇರಿಕೊಂಡು ಆಶಿಶ್‌ನನ್ನು ಕೊಂದು ಅದನ್ನು ಅಪಘಾತವೆಂದು ಬಿಂಬಿಸಲು ಪ್ರಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ. ಈಗ ಇದನ್ನು ರಾಜಸ್ಥಾನದ ಹನಿಮೂನ್ ಕೊಲೆ ಎಂದು ಬಿಂಬಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!