ಉದಯವಾಹಿನಿ, ಢಾಕಾ: ಬಾಂಗ್ಲಾದೇಶ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಹಾಗೂ ಮಧ್ಯಂತರ ಪ್ರಧಾನಿ ಮೊಹಮ್ಮದ್‌ ಯೂನಸ್‌ ಅವರ ನಿವಾಸದ ಎದುರು ಇಂದು ಹೈ ಡ್ರಾಮಾ ನಡೆಯಿತು. ಒಂಬತ್ತನೇ ರಾಷ್ಟ್ರೀಯ ವೇತನ ಶ್ರೇಣಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸುತ್ತಿರುವ ಸರ್ಕಾರಿ ನೌಕರರು ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರ ಅಧಿಕೃತ ನಿವಾಸವಾದ ಜಮುನಾ ಹೊರಗೆ ಪ್ರತಿಭಟನೆಯನ್ನು ನಡೆಸಿದರು. ಬಾಂಗ್ಲಾದ ಸಾರ್ವತ್ರಿಕ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಈ ಹಿಂಸಾಚಾರ ಹಾಗೂ ಪ್ರತಿಭಟನೆ ನಡೆದಿದೆ.

ಒಂಬತ್ತನೇ ರಾಷ್ಟ್ರೀಯ ವೇತನ ಆಯೋಗದ ವರದಿಯನ್ನು ಆಧರಿಸಿದ ಗೆಜೆಟ್ ಅನ್ನು ತಕ್ಷಣ ಪ್ರಕಟಿಸಿ ಜಾರಿಗೆ ತರಬೇಕೆಂದು ಒತ್ತಾಯಿಸಿ ದೇಶಾದ್ಯಂತದ ಪ್ರತಿಭಟನಾಕಾರರು ಶಹೀದ್ ಮಿನಾರ್‌ನಲ್ಲಿ ಜಮುನಾ ಕಡೆಗೆ ಮೆರವಣಿಗೆ ನಡೆಸಿದರು. ತಿನ್ನಲು ಅನ್ನವೇ ಇಲ್ಲ, ಇನ್ನು ಅಭಿವೃದ್ಧಿಯೆಲ್ಲಿ ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಲಾಗಿದೆ. ಬೆಳಿಗ್ಗೆ 11.30 ಕ್ಕೆ, ಪ್ರತಿಭಟನಾಕಾರರು ಶಹಬಾಗ್‌ನಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿ ಜಮುನಾ ಪ್ರವೇಶದ್ವಾರದ ಕಡೆಗೆ ಮುನ್ನಡೆದರು. ಪೊಲೀಸರು ಜಲಫಿರಂಗಿ, ಅಶ್ರುವಾಯು ಮತ್ತು ಧ್ವನಿ ಗ್ರೆನೇಡ್‌ಗಳನ್ನು ಹಾರಿಸಿ, ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ನಡೆಸಿದರು.

ಪ್ರತಿಭಟನೆಯು ನಿವಾಸವನ್ನು ತಲುಪದಂತೆ ತಡೆಯಲು ಸಮವಸ್ತ್ರಧಾರಿ ಸೈನಿಕರನ್ನು ಸಹ ನಿಯೋಜಿಸಲಾಗಿತ್ತು. ಘರ್ಷಣೆಗಳು ತೀವ್ರಗೊಂಡಿದ್ದರಿಂದ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಡದಂತೆ ನಾವು ಜಾಗರೂಕರಾಗಿದ್ದೇವೆ. ಪ್ರತಿಭಟನಾಕಾರರು ಬೇರೆಡೆಗೆ ಸ್ಥಳಾಂತರಗೊಳ್ಳುವಂತೆ ನಾವು ಅವರೊಂದಿಗೆ ಮಾತನಾಡುತ್ತಿದ್ದೇವೆ” ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!