ಉದಯವಾಹಿನಿ, ಜೈಪುರ(ರಾಜಸ್ಥಾನ): ದೆಹಲಿಯ ಅಮರ್​ ಕಾಲೊನಿಯಲ್ಲಿ ಐಆರ್​ಎಸ್​ ಅಧಿಕಾರಿಯ ಮಗಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ 19 ವರ್ಷದ ಯುವಕ ರಾಹುಲ್ ಮೀನಾ ಸರಣಿ ದುಷ್ಕೃತ್ಯ ಎಸಗಿರುವುದು ಇದೀಗ ಬಯಲಾಗುತ್ತಿದೆ. ಈತನ ವಿರುದ್ಧ ರಾಜಸ್ಥಾನದ ಆಳ್ವಾರ್​ನಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ ಎಂದು ಅಲ್ಲಿನ​ ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ದುಷ್ಕೃತ್ಯಕ್ಕೂ ಮುನ್ನ ಈತ ಆಳ್ವಾರ್​​ನಲ್ಲಿ ತನ್ನ ಸ್ನೇಹಿತನ ಪತ್ನಿಯ ಮೇಲೂ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಐಆರ್​ಎಸ್​ ಅಧಿಕಾರಿಯ 22 ವರ್ಷದ ಮಗಳ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ದೆಹಲಿಯ ದ್ವಾರಕ ಪೊಲೀಸರು ಆರೋಪಿ ರಾಹುಲ್‌ನನ್ನು ಬಂಧಿಸಿದ್ದು, ಇದರ ಬೆನ್ನಲ್ಲೇ ಆಳ್ವಾರ್​ ಪೊಲೀಸರು ಇಲ್ಲಿನ ಅತ್ಯಾಚಾರ ಸಂಬಂಧ ತನಿಖೆಗೆ ವಿಶೇಷ ತಂಡ ರಚಿಸಿದ್ದಾರೆ.
ಆಳ್ವಾರ್​​ ಎಸ್​ಪಿ ಸುಧೀರ್​ ಚೌಧರಿ ಅವರು ಪ್ರತಿಕ್ರಿಯಿಸಿ, “ಮಂಗಳವಾರ ರಾತ್ರಿ ಸಂತ್ರಸ್ತೆಯ ಪತಿ ಆಳ್ವಾರ್​​​ ಜಿಲ್ಲೆಯ ರಾಜ್​ಗಢ ಪೊಲೀಸ್​ ಠಾಣೆಯಲ್ಲಿ ರಾಹುಲ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಿದ್ದೇವೆ. ನಾವು ಈಗಾಗಲೇ 6ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದೇವೆ” ಎಂದು ಹೇಳಿದರು. ಮಂಗಳವಾರ ಸಂಜೆ ಆರೋಪಿ ರಾಹುಲ್​ ಜೊತೆಗೆ ನಾನು ಮದುವೆಗೆ ಹೋಗಿದ್ದೆ. ನಾನು ಅಲ್ಲೇ ಉಳಿದುಕೊಂಡಿದ್ದು, ರಾಹುಲ್​ ಗ್ರಾಮಕ್ಕೆ ಹಿಂದಿರುಗಿದ್ದಾನೆ. ಹೀಗೆ ಬಂದನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಘಟನೆಯನ್ನು ಪತ್ನಿ ನನಗೆ ಫೋನ್​ನಲ್ಲಿ ತಿಳಿಸಿದಳು ಎಂದು ಪತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!