ಉದಯವಾಹಿನಿ, ವಾಷಿಂಗ್ಟನ್‌, : ದಿನಕ್ಕೊಂದು ಹೇಳಿಕೆ, ವಿಚಿತ್ರ ನಡೆಯ ಮೂಲಕ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಅಮೆರಿಕದ ಮಾಜಿ ಅ‍ಧ್ಯಕ್ಷ ಬರಾಕ್‌ ಒಬಾಮಾ ಮತ್ತು ಅವರ ಪತ್ನಿ ಮಿಶೆಲ್‌ ಒಮಾಬಾ ಅವರ ವಿರುದ್ಧ ಜನಾಂಗೀಯ ನಿಂದನೆಯ ಪೋಸ್ಟ್‌ ಹಂಚಿಕೊಂಡಿದ್ದಾರೆ. ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಪೋಸ್ಟ್‌ ಡಿಲೀಟ್‌ ಮಾಡಿ ಸಿಬ್ಬಂದಿಯನ್ನು ದೂರಿದ್ದಾರೆ. ಸದ್ಯ ಟ್ರಂಪ್‌ ಅವರ ನಡೆಗೆ ಸಾರ್ವತ್ರಿಕ ವಿರೋಧ ವ್ಯಕ್ತವಾಗುತ್ತಿದೆ. ಡೊನಾಲ್ಡ್ ಟ್ರಂಪ್ ಅವರ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಶೆಲ್ ಅವರನ್ನು ಕೋತಿಗಳಂತೆ ಚಿತ್ರಿಸುವ ಜನಾಂಗೀಯ ನಿಂದನೆಯ ವಿಡಿಯೊವನ್ನು ಸಿಬ್ಬಂದಿಯೊಬ್ಬರು ತಪ್ಪಾಗಿ ಪೋಸ್ಟ್‌ ಮಾಡಿದ್ದಾರೆ ಮತ್ತು ಅದನ್ನು ಡಿಲೀಟ್‌ ಎಂದು ಶ್ವೇತಭವನ  ತಿಳಿಸಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯಲ್ಲಿ ಒಬಾಮಾ ದಂಪತಿಯನ್ನು ಮಂಗಗಳಂತೆ ಚಿತ್ರಿಸಿರುವ ಎಐ ಆಧಾರಿತ ವಿಡಿಯೊವನ್ನು ಪೋಸ್ಟ್ ಮಾಡಲಾಗಿತ್ತು. ಇದು ತೀವ್ರ ಟೀಕೆಗಳನ್ನು ಎದುರಿಸಿದ ನಂತರ, ಟ್ರಂಪ್‌ ಅವರ ಮಿತ್ರ ಟಿಮ್ ಸ್ಕಾಟ್ ಸೇರಿದಂತೆ, ಶ್ವೇತಭವನವು ಸ್ಪಷ್ಟೀಕರಣವನ್ನು ನೀಡಿದೆ. ಒಬಾಮಾ ದಂಪತಿಯನ್ನು ಮಂಗಗಳಂತೆ ಚಿತ್ರಿಸಿರುವ ವಿಡಿಯೊವನ್ನು ಸಿಬ್ಬಂದಿಯೊಬ್ಬರು ಬಿಡುಗಡೆ ಮಾಡಿದ್ದಾರೆ ಎಂದು ನುಣುಚಿಕೊಳ್ಳಲು ಯತ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!