ಉದಯವಾಹಿನಿ, ಬಾಳೆಹಣ್ಣು ಸೇವನೆಯಿಂದ ಆರೋಗ್ಯಕ್ಕೆ ವಿವಿಧ ಪ್ರಯೋಜನಗಳಿವೆ. ಹಾಗಂತ ಎಲ್ಲಾ ಸಮಯದಲ್ಲೂ ಬಾಳೆಹಣ್ಣು ತಿನ್ನುವುದು ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಬಾಳೆಹಣ್ಣುಗಳನ್ನು ಯಾವ ಸಮಯದಲ್ಲಿ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಬಾಳೆಹಣ್ಣುಗಳನ್ನು ಸೇವಿಸಲು ಉತ್ತಮ ಸಮಯ ಯಾವುದು ಎನ್ನುವುದು ಅನೇಕರಿಗೆ ತಿಳಿದಿಲ್ಲ.

ವೈದ್ಯೆ ಜನೈನ್ ಬೋವಿಂಗ್ ಅವರು ತಿಳಿಸುವಂತೆ, ಬಾಳೆಹಣ್ಣುಗಳು ವಿಟಮಿನ್ ಎ, ಸಿ ಹಾಗೂ ಬಿ6, ಪೊಟ್ಯಾಸಿಯಮ್, ಸೋಡಿಯಂ, ಕಬ್ಬಿಣ ಹಾಗೂ ಹಲವಾರು ಉತ್ಕರ್ಷಣ ನಿರೋಧಕಗಳು, ಫೈಟೊನ್ಯೂಟ್ರಿಯೆಂಟ್‌ಗಳಂತಹ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಇವೆಲ್ಲವುಗಳು ನಮ್ಮ ದೇಹಕ್ಕೆ ಅವಶ್ಯಕವಾಗಿ ಬೇಕು. ಬಾಳೆಹಣ್ಣುಗಳು ಎಲ್ಲಾ ಋತುಗಳಲ್ಲಿ ಲಭ್ಯವಿದೆ, ಭಾರತದ ಪ್ರತಿಯೊಂದು ಭಾಗದಲ್ಲೂ ಕೂಡ ಬಾಳೆಹಣ್ಣುಗಳನ್ನು ಲಭಿಸುತ್ತದೆ. ಅದಕ್ಕಾಗಿಯೇ ಜನರು ಬಾಳೆಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಾರೆ.

ದಿನನಿತ್ಯ ಬಾಳೆಹಣ್ಣು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಬಾಳೆಹಣ್ಣಿನಲ್ಲಿ ಕ್ಯಾಲೊರಿಗಳು, ಕೊಬ್ಬು, ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ಫೈಬರ್, ವಿಟಮಿನ್ ಸಿ, ರಿಬೋಫ್ಲಾವಿನ್, ಫೋಲೇಟ್, ನಿಯಾಸಿನ್, ತಾಮ್ರ, ಪೊಟ್ಯಾಸಿಯಮ್ ಹಾಗೂ ಮೆಗ್ನೀಸಿಯಮ್ ಇರುತ್ತವೆ. ಇವೆಲ್ಲವೂ ನಮ್ಮ ದೇಹಕ್ಕೆ ಅತ್ಯಗತ್ಯ. ಬಾಳೆಹಣ್ಣು ತಿನ್ನುವುದು ಮಧುಮೇಹವನ್ನು ನಿರ್ವಹಿಸಲು ತುಂಬಾ ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಮೂಳೆಗಳನ್ನು ಬಲಪಡಿಸುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

Leave a Reply

Your email address will not be published. Required fields are marked *

error: Content is protected !!