ಉದಯವಾಹಿನಿ, ಸಾಂಪ್ರದಾಯಿಕ ಶೈಲಿಯ, ನಮ್ಮ ಅಜ್ಜಿಯರ ಕಾಲದಲ್ಲಿ ತಯಾರಿಸುತ್ತಿದ್ದ ತುಂಬಾ ರುಚಿಕರವಾದ ಚಟ್ನಿ ರೆಸಿಪಿಯನ್ನು ನಾವಿಂದು ನಿಮಗಾಗಿ ತಂದಿದ್ದೇವೆ. ವಾತಾವರಣ ತಂಪಗಿರುವ ಈ ಸಮಯದಲ್ಲಿ ಈ ಚಟ್ನಿಯ ಬಳಕೆ ತುಸು ಹೆಚ್ಚು. ಬಾಯಲ್ಲಿ ನೀರೂರಿಸುವ ಮೂಲಂಗಿ ಚಟ್ನಿಯನ್ನು ಮನೆಯಲ್ಲೇ ಒಮ್ಮೆ ತಯಾರಿಸಿ ನೋಡಿ, ಕುಟುಂಬದ ಎಲ್ಲ ಸದಸ್ಯರೂ ತುಂಬಾ ಇಷ್ಟಪಟ್ಟು ಸವಿಯುತ್ತಾರೆ.

ಮೂಲಂಗಿ ಚಟ್ನಿ ಮಾಡುವುದು ತುಂಬಾ ಸುಲಭ. ಮೊದಲ ಬಾರಿಗೆ ಪ್ರಯತ್ನಿಸುವವರು ಕೂಡಾ ತುಂಬಾ ಸರಳವಾಗಿ ಸಿದ್ಧಪಡಿಸಬಹುದು. ಜೋಳ ರೊಟ್ಟಿಯೊಂದಿಗೆ ಈ ಚಟ್ನಿ ಸವಿದರೆ ರುಚಿ ಅದ್ಭುತ. ಭೋಜನದಲ್ಲಿ ಚಟ್ನಿಯನ್ನು ಇಷ್ಟಪಡುವವರು ಶೀತ ಋತುವಿನಲ್ಲಿ ಟ್ರೈ ಮಾಡಬಹುದು. ಬನ್ನಿ, ತಡಮಾಡದೆ ಮೂಲಂಗಿ ಚಟ್ನಿ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಶೇಂಗಾ – 3 ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ಧನಿಯಾ – 3 ಟೀಸ್ಪೂನ್
ಎಳ್ಳು – 1 ಟೀಸ್ಪೂನ್
ಎಣ್ಣೆ – 2 ಟೀಸ್ಪೂನ್
ಹಸಿ ಮೆಣಸಿನಕಾಯಿ – 6
ಉಪ್ಪು – ರುಚಿಗೆ ತಕ್ಕಷ್ಟು
ಮೂಲಂಗಿ – 1/2 ಕೆಜಿ
ಟೊಮೆಟೊ – 3
ಹುಣಸೆ – ನಿಂಬೆ ಗಾತ್ರದಷ್ಟು
ಬೆಳ್ಳುಳ್ಳಿ – 6
ಈರುಳ್ಳಿ – 1
ಕೊತ್ತಂಬರಿ ಸೊಪ್ಪು- 1 ಸಣ್ಣ ಕಟ್ಟು

 

Leave a Reply

Your email address will not be published. Required fields are marked *

error: Content is protected !!