ಉದಯವಾಹಿನಿ, ಬೆಂಗಳೂರು: ಅಸಂವಿಧಾನಿಕ ಪದಬಳಕೆ ಆರೋಪದ ಮೇಲೆ ನಟ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಉಪ್ಪರ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನಿರ್ಮಾಪಕ ಕೆ. ಮಂಜು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ. ಬಿಎನ್‌ಎಸ್ ಸೆಕ್ಷನ್ 351, 352 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಾನಹಾನಿ, ಬೆದರಿಕೆ, ಶಾಂತಿ ಭಂಗವನ್ನ ಉಂಟು ಮಾಡುವ ಆರೋಪದಡಿಲ್ಲಿ ಪ್ರಕರಣ ದಾಖಲಾಗಿದೆ.
ಚಕ್ರವರ್ತಿ ಚಂದ್ರಚೂಡ್ ನಿರ್ಮಾಪಕರ ಬಗ್ಗೆ ಅಸಂವಿಧಾನಿಕ ಪದಬಳಕೆ ಮಾಡಿ ಮಾತನಾಡಿದ್ದರು. ಕನ್ನಡ ಚಿತ್ರ ನಿರ್ಮಾಪಕರ ಪರವಾಗಿ ನಿರ್ಮಾಪಕ ಕೆ. ಮಂಜು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ಸಂಬಂಧ ಆರಂಭದಲ್ಲಿ ಎನ್ಸಿಆರ್ ದಾಖಲಾಗಿತ್ತು. ಕೋರ್ಟ್ ಅನುಮತಿ ಪಡೆದು, ಚಂದ್ರಚೂಡ್ ವಿರುದ್ಧ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಹೇಳಿಕೆ ಪಡೆಯಲು ನಟ ನಿರ್ದೇಶಕ ಚಂದ್ರಚೂಡ್‌ಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಲು ಉಪ್ಪಾರ ಪೇಟೆ ಪೊಲೀಸರು ಮುಂದಾಗಿದ್ದಾರೆ.
