ಉದಯವಾಹಿನಿ, ಕೌಲಾಲಂಪುರ : ಹೋಟೆಲ್‌ಗಳಲ್ಲಿ ಕಳಪೆ, ಅಸುರಕ್ಷಿತ ಆಹಾರ ಬಳಕೆಯ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತವೆ. ಇದೀಗ ಅಂತಹುದೇ ವಿಡಿಯೊವೊಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ. ಹೋಟೆಲ್‌ನಲ್ಲಿ ಉಳಿದಿದ್ದ ಚಿಕನ್, ಮಟನ್ ತುಂಡುಗಳನ್ನು ನೀರಿನಲ್ಲಿ ತೊಳೆದು ಅವುಗಳನ್ನು ಮತ್ತೆ ಮಾರಾಟ ಮಾಡಲು ಸಿದ್ಧತೆ ನಡೆಸುತ್ತಿದ್ದ ಆಘಾತಕಾರಿ ಘಟನೆಯೊಂದು ಕಂಡು ಬಂದಿದೆ.
ಮಲೇಷ್ಯಾದ ನಾಸಿ ಕಂದರ್ ರೆಸ್ಟೋರೆಂಟ್‌ನ ಸಿಬ್ಬಂದಿ ಕೋಳಿ, ಮಟನ್ ಮಾಂಸಗಳನ್ನು ತೊಳೆದು ಮರುಬಳಕೆಗಾಗಿ ಟ್ರೇಗಳಲ್ಲಿ ಅಳವಡಿಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು, ವ್ಯಾಪಕ ಆಕ್ರೋಸ ವ್ಯಕ್ತವಾಗುತ್ತಿದೆ. ಕಳಪೆ ಆಹಾರ ಸೇವನೆಯಿಂದ ಆರೋಗ್ಯ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹೋಟೆಲ್‌ಗಳಲ್ಲಿ ಅಶುಚಿತ್ವ ಪದಾರ್ಥಗಳ ಸಂಗ್ರಹ ಹೆಚ್ಚಾಗಿದೆ. ಮಲೇಷ್ಯಾದ ನಾಸಿ ಕಂದರ್ ಹೋಟೆಲ್‌ಗೆ ತಡರಾತ್ರಿ ಭೇಟಿ ನೀಡಿದ ವ್ಯಕ್ತಿಯೊಬ್ಬರು, ಹಿಂಭಾಗದಲ್ಲಿ ಸಿಬ್ಬಂದಿ ಮಾಡುತ್ತಿದ್ದ ಈ ಕೃತ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ.
ನಾಸಿ ಕಂದರ್ ರೆಸ್ಟೋರೆಂಟ್‌ನ ಸಿಬ್ಬಂದಿ ಕೋಳಿ, ಮಟನ್ ಮತ್ತು ತೋಫು ಸೇರಿದಂತೆ ಉಳಿದ ಬೇಯಿಸಿದ ಆಹಾರವನ್ನು ತೊಳೆದು ಮರುಬಳಕೆಗಾಗಿ ಟ್ರೇಗಳಲ್ಲಿ ಹಾಕುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ವಿಡಿಯೊ ರೆಕಾರ್ಡ್ ಮಾಡಿದ ವ್ಯಕ್ತಿ ತಾವು ತಡರಾತ್ರಿ ಭೇಟಿ ನೀಡಿದಾಗ ಈ ದೃಶ್ಯ ಕಂಡು ಬಂದಿದೆ ಎಂದಿದ್ದಾರೆ. ವಿಡಿಯೊ ವೈರಲ್ ಆದ ಕೂಡಲೇ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕರು ಇದನ್ನು ಅಸುರಕ್ಷಿತ ಮತ್ತು ಅನೈರ್ಮಲ್ಯ ಎಂದು ಕರೆದಿದ್ದಾರೆ. ಘಟನೆಯ ನಂತರ, ನೆಗೇರಿ ಸೆಂಬಿಲನ್ ಆರೋಗ್ಯ ಇಲಾಖೆಯು ರೆಸ್ಟೋರೆಂಟ್ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ. ಈ ರೀತಿ ಉಳಿದ ಆಹಾರವನ್ನು ಮರುಬಳಕೆ ಮಾಡುವುದರಿಂದ ಸಾರ್ವಜನಿಕರ ಆರೋಗ್ಯಕ್ಕೆ ಅಪಾಯಗಳು ಉಂಟಾ ಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ಅನೈರ್ಮಲ್ಯ ರೀತಿಯಲ್ಲಿ ವ್ಯವಹಾರ ನಡೆಸಿದ್ದಕ್ಕಾಗಿ ಮಾಲಕನಿಗೆ ಭಾರಿ ಮೊತ್ತದ ದಂಡ ವಿಧಿಸಲಾಗಿದೆ.
