ಉದಯವಾಹಿನಿ, ಮೈದುಗುರಿ(ನೈಜೀರಿಯಾ): ಈಶಾನ್ಯ ರಾಜ್ಯ ಬೊರ್ನೋದಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳ ತಂಡ ಗ್ರಾಮಗಳ ಮೇಲೆ ದಾಳಿ ನಡೆಸಿ 25 ನಾಗರಿಕರನ್ನು ಹತ್ಯೆ ಮಾಡಿದೆ.ರಾಜ್ಯದ ಗಡಿ ಪ್ರದೇಶದಲ್ಲಿನ ಗ್ರಾಮವೊಂದಕ್ಕೆ 15 ಕ್ಕೂ ಹೆಚ್ಚು ದ್ವಿಚಕ್ರ ವಾಹನದಲ್ಲಿ ಬಂದ ಭಯೋತ್ಪಾದಕರು ಕುರಿ ಮೇಯಿಸುತ್ತಿದ್ದವರ ಮೇಲೆ ದಾಳಿ ಮಾಡಿದ್ದಾರೆ.ಅಲ್ಲದೆ ಭದ್ರತಾ ಪಡೆಗಳ ಗಮನವನ್ನು ತಪ್ಪಿಸುವ ಸಲುವಾಗಿ ಒಂದೇ ಒಂದು ಗುಂಡು ಹಾರಿಸದೆ 18 ಮಂದಿಯ ಶಿರಚ್ಛೇದ ಮಾಡಿದ್ದಾರೆ. ಇನ್ನೊಂದು ಗ್ರಾಮದಲ್ಲಿ 7 ಮಂದಿಯ ಮೇಲೆ ಗುಂಡು ಹಾರಿಸಿ ಹತ್ಯೆ
ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
