ಉದಯವಾಹಿನಿ,
ಲಾಹೋರ್: ಮದುವೆಯಲ್ಲಿ ಹೆಣ್ಣುಮಕ್ಕಳಿಗೆ ಬಂಗಾರ ನೀಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ತಂದೆ ಮಗಳ ಮದುವೆಯಲ್ಲಿ ಆಕೆಯ ಚಿನ್ನದ ತುಲಾಭಾರ ಮಾಡಿದ್ದಾನೆ. ಮಗಳ ತೂಕಕ್ಕೆ ತಕ್ಕಂತೆ ಬರೋಬ್ಬರಿ 70 ಕೆ.ಜಿ ಚಿನ್ನದ ಬಿಸ್ಕತ್ತನ್ನು ಹಾಕಿ ತುಲಾಭಾರ ಮಾಡಲಾಗಿದೆ.
ಆಯೇಷಾ ತಹಿರ್ ಎನ್ನುವ ವಧು ತಕ್ಕಡಿಯಲ್ಲಿ ಕುಳಿತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದ್ದು, ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಕೆಂಪು ಬಣ್ಣದ ದುಪಟ್ಟಾದೊಂದಿಗೆ ಸುಂದರವಾದ ಹಸಿರು ಬಣ್ಣದ ಲೆಹೆಂಗಾ ತೊಟ್ಟ ವಧುವನ್ನು ತಕ್ಕಡಿಯ ಒಂದು ಭಾಗದಲ್ಲಿ ಕೂರಿಸಿ ಇನ್ನೊಂದು ಕಡೆ ಚಿನ್ನದ ಬಿಸ್ಕತ್ತುಗಳನ್ನಿರಿಸಿ ತುಲಾಭಾರ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡ ವಧು ಆಯೇಷಾ, ಬಾಲಿವುಡ್ ಸಿನಿಮಾ ಜೋಧಾ ಅಕ್ಬರ್ ಅನ್ನು ಹೋಲುವಂತೆ ಮಾಡಲು ಈ ರೀತಿ ಮಾಡಲಾಗಿತ್ತು. ಆದರೆ ಅವೆಲ್ಲವೂ ನಿಜವಾದ ಚಿನ್ನವಲ್ಲ. ಚಿನ್ನ ಲೇಪಿತ ಬಿಸ್ಕತ್ತುಗಳು ಎಂದು ಹೇಳಿದ್ದಾರೆ.
