ಉದಯವಾಹಿನಿ,: ಪನೀರ್‌ ತಿನ್ಬೇಕು ಅನ್ನೋರಿಗೆ ಈ ರೆಸಿಪಿ ತುಂಬಾ ಇಷ್ಟ ಆಗುತ್ತೆ. ಸಾಮಾನ್ಯವಾಗಿ ಪನೀರ್‌ ಬಳಸಿ ಪನೀರ್‌ ಕರ್ರಿ, ಪನೀರ್‌ 65, ಪನೀರ್‌ ಮಂಚೂರಿಯನ್‌ ಮಾಡಿ ತಿನ್ಬೋದು ಅಷ್ಟೆ. ಅದೇ ಪನೀರ್‌ ಬುರ್ಜಿ ಮಾಡಿದರೆ ಚಪಾತಿ, ಅನ್ನದ ಜೊತೆಗೆ ತಿನ್ನಬಹುದು. ಮತ್ತೆ ಕಡಿಮೆ ಸಮಯದಲ್ಲಿ ಸುಲಭವಾಗಿ ಮಾಡಬಹುದು. ಆಫೀಸ್‌ ಹೋಗುವರರು ಗಡಿಬಿಡಿಯಲ್ಲಿಯೂ ಕೂಡ ಇದನ್ನು ಮಾಡಿಕೊಳ್ಳಬಹುದು. 2 ನಿಮಿಷ ಸಾಕು.. ಥಟ್‌ ಅಂತ ಮಾಡಿಬಿಡಬಹುದು.

ಬೇಕಾಗುವ ಸಾಮಾಗ್ರಿಗಳು:
ಈರುಳ್ಳಿ
ಟೊಮ್ಯಾಟೋ
ಮೆಣಸಿನಕಾಯಿ
ಉಪ್ಪು
ಪನೀರ್‌
ಎಣ್ಣೆ
ಮಾಡುವ ವಿಧಾನ:
ಮೊದಲಿಗೆ ಈರುಳ್ಳಿ, ಟೊಮ್ಯಾಟೋ ಹಾಗೂ ಮೆಣಸಿನಕಾಯಿಯನ್ನು ಆದಷ್ಟು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು. ಬುರ್ಜಿ ಎಷ್ಟು ಮಾಡಬೇಕು ಎನ್ನುವ ಆಧಾರದ ಮೇಲೆ ಪನೀರ್‌ ತೆಗೆದುಕೊಂಡು, ತುರಿದುಕೊಳ್ಳಬೇಕು. ಬಳಿಕ ಒಂದು ಕಡಾಯಿಗೆ ಎಣ್ಣೆ ಹಾಕಿ.. ಕಾದ ನಂತರ ಅದಕ್ಕೆ ಈರುಳ್ಳಿ ಹಾಕಿ ಹುರಿದುಕೊಳ್ಳಿ. ಬಣ್ಣ ತಿರುಗುವವರೆಗೂ ಹುರಿದುಕೊಂಡು ಅದಕ್ಕೆ ಮೆಣಸಿಕಾಯಿ ಹಾಕಿಕೊಳ್ಳಿ. ಬಳಿಕ ಟೊಮ್ಯಾಟೋ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಹುರಿಯಿರಿ. ಈ ಮಿಶ್ರಣಕ್ಕೆ ಅರಿಶಿಣ ಹಾಕಿ, ಪನೀರ್‌ ಹಾಕಿಕೊಂಡು ಹುರಿದರೆ ಪನೀರ್‌ ಬುರ್ಜಿ ತಯಾರಾಗುತ್ತದೆ. ಒಂದು ವೇಳೆ ಗ್ರೇವಿ ರೂಪದಲ್ಲಿ ಬೇಕಿದ್ದರೆ ಹೆಚ್ಚು ಟೊಮ್ಯಾಟೋ ಹಾಕಿದರೆ ಸಾಕು, ಗ್ರೇವಿ ಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *

error: Content is protected !!