ಉದಯವಾಹಿನಿ, ಬೆಂಗಳೂರು: ತಾಯಿ ಮತ್ತು ದೊಡ್ಡಮ್ಮನ ಖಾಸಗಿ ಚಿತ್ರಗಳನ್ನು ಪ್ರೇಯಸಿಯೇ ಪ್ರಿಯತಮನಿಗೆ ಕಳುಹಿಸಿದ ಶಾಕಿಂಗ್‌ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ತನ್ನ 23 ವರ್ಷದ ಮಗಳು ತನ್ನ ಖಾಸಗಿ ಛಾಯಾಚಿತ್ರಗಳನ್ನು ಮತ್ತು ತನ್ನ ಸಹೋದರಿಯ ನಗ್ನ ಚಿತ್ರಗಳನ್ನು ವರುಣ್ ಅಲಿಯಾಸ್ ಗಿರಿಧರ್ ಎಂಬ ವ್ಯಕ್ತಿಗೆ ಕಳುಹಿಸಿದ್ದಾಳೆ. ಇದು ಆನ್‌ಲೈನ್ ಶೋಷಣೆ ಮತ್ತು ವೈಯಕ್ತಿಕ ಡೇಟಾದ ದುರುಪಯೋಗದ ಭಯವನ್ನು ಹುಟ್ಟುಹಾಕಿದೆ ಎಂದು ಆರೋಪಿಸಿ 49 ವರ್ಷದ ಮಹಿಳೆಯೊಬ್ಬರು ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ.
ಕಳೆದ 25 ವರ್ಷಗಳಿಂದ ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಕುಟುಂಬ ನೆಲೆಸಿದ್ದು ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಹಿರಿಯ ಮಗಳು ಬಿಬಿಎ ಓದಿದ್ದು ನಿರುದ್ಯೋಗಿಯಾಗಿದ್ದಾಳೆ.
ಕಿರಿಯ ಮಗಳು ತನ್ನ ಅಧ್ಯಯನ ಮಾಡುತ್ತಿದ್ದು ತಂದೆ ಅಡುಗೆ ಕೆಲಸ ಮಾಡುತ್ತಿದ್ದಾರೆ.
ಒಂದು ವರ್ಷದ ಹಿಂದೆ ಹಿರಿಯ ಮಗಳು ಶೈಕ್ಷಣಿಕ ಮತ್ತು ವೃತ್ತಿಯ ಉದ್ದೇಶಕ್ಕಾಗಿ ಸ್ಮಾರ್ಟ್‌ಫೋನ್‌ ಬೇಕೆಂದು ತಂದೆಯ ಬಳಿ ಕೇಳಿಕೊಂಡಿದ್ದಾಳೆ. ತಂದೆ ಮಗಳ ಕೋರಿಕೆಯಂತೆ ಸ್ಮಾರ್ಟ್‌ಫೋನ್‌ ತೆಗೆಸಿಕೊಟ್ಟಿದ್ದಾರೆ.ಒಂದೂವರೆ ತಿಂಗಳ ಹಿಂದೆ ಮನೆ ಕೆಲಸ ಮಾಡುತ್ತಿದ್ದಾಗ ತಾಯಿ ಮಗಳಿದ್ದ ಕೋಣೆಯನ್ನು ಪ್ರವೇಶ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಗಳು ವಿಡಿಯೋ ಕರೆಯಲ್ಲಿ ಯುವಕನ ಜೊತೆಗೆ ಮಾತನಾಡುತ್ತಿದ್ದಳು. ತಾಯಿ ಪ್ರವೇಶಿಸುತ್ತಿದ್ದಂತೆ ಮಗಳು ಕರೆಯನ್ನು ದಿಢೀರ್‌ ಕಡಿತ ಮಾಡಿದ್ದಾಳೆ. ಮಗಳು ಕರೆಯನ್ನು ಕಡಿತ ಮಾಡಿದ ಬಳಿಕ ತಾಯಿಗೆ ಅನುಮಾನ ಬರಲು ಆರಂಭವಾಗಿದೆ.

 

Leave a Reply

Your email address will not be published. Required fields are marked *

error: Content is protected !!