ಉದಯವಾಹಿನಿ, ಬಿಹಾರ: ನನ್ನ ವಿರುದ್ದ ಪಿತೂರಿ ನಡೆಸಲಾಗುತ್ತಿದೆ. ಇದರಲ್ಲಿ ಐವರು ಜೈಚಂದ್ ಗಳಾದ ಮುಖೇಶ್ ರೌಶನ್, ಸಂಜಯ್ ಯಾದವ್, ಶಕ್ತಿ ಸಿಂಗ್ ಯಾದವ್, ರಮೀಜ್ ಮತ್ತು ಸುನಿಲ್ ಸಿಂಗ್ ಸೇರಿದ್ದಾರೆ. ಇವರ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಬಿಹಾರದ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ಹೇಳಿದರು. ನಾನು ಇತ್ತೀಚೆಗೆ ಖಿನ್ನತೆಯಿಂದ ಬಳಲುತ್ತಿದ್ದೇನೆ. ಜೈಚಂದ್ ಗಳು ಕೆಲವು ತಿಂಗಳಿನಿಂದ ನನಗೆ ಸಂಬಂಧ ಹೊಂದಿರುವ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ ಎನ್ನುವ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಜೆಜೆಡಿ ಮುಖ್ಯಸ್ಥ ಮತ್ತು ಲಾಲು ಪ್ರಸಾದ್ ಯಾದವ್ ಅವರಿಂದ ದೂರವಾಗಿರುವ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಈ ಹಿಂದೆ ಬಿಹಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಮಾಜಿ ಸಚಿವರಾಗಿದ್ದರು. ಕೆಲವು ತಿಂಗಳುಗಳ ಹಿಂದೆ ಇವರು ಸಂಬಂಧ ಹೊಂದಿದ್ದ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ ಎನ್ನುವ ಸುದ್ದಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿತ್ತು. ಇದು ತಮ್ಮ ಮಾನಹಾನಿ ಮಾಡುವ ಪಿತೂರಿ ಎಂದು ತೇಜ್ ಪ್ರತಾಪ್ ತಿಳಿಸಿದರು.
