ಉದಯವಾಹಿನಿ, ಮಂಗಳೂರು: ಮಂಗಳೂರು ಕಾಲೇಜಿಗೆ ಸೇರಿಸಲಿ ಅಂತ ವಿದ್ಯಾರ್ಥಿನಿಯೊಬ್ಬರು ಕಿಡ್ನ್ಯಾಪ್ ಡ್ರಾಮಾ ಮಾಡಿರುವ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿ ಯುವತಿ ಬ್ಲೇಡ್‌ನಲ್ಲಿ ಸಣ್ಣದಾಗಿ ಕೈ ಕೊಯ್ದುಕೊಂಡು ಕಿಡ್ನ್ಯಾಪ್ ನಾಟಕವಾಡಿದ್ದಳು. ಕಿಡ್ನ್ಯಾಪ್ ಡ್ರಾಮಾ ಮಾಡಿದರೆ ಮನೆಯವರು ಮಂಗಳೂರಿನ ಪಿಯುಸಿ ಕಾಲೇಜಿಗೆ ಸೇರಿಸುತ್ತಾರೆ ಅನ್ನೋ ಪ್ಲ್ಯಾನ್ ಮಾಡಿದ್ದಳು.

ನಿನ್ನೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಯತ್ನ ಪ್ರಕರಣ ದಾಖಲಾಗಿತ್ತು. ಇಡೀ ದಿನ ಪೊಲೀಸರ ತಂಡದಿಂದ ಕಾರ್ಯಾಚರಣೆ ನಡೆಸಲಾಯಿತು. ಬ್ಯಾಗ್‌ನಲ್ಲಿರೋ ಪುಸ್ತಕಗಳನ್ನು ವಿದ್ಯಾರ್ಥಿನಿ ಮನೆಯಲ್ಲೇ ಸುಟ್ಟು ಹಾಕಿದ್ದಳು. ಬಳಿಕ ಬ್ಯಾಗ್‌ನ್ನು ದಾರಿಯಲ್ಲೇ ಬಿಸಾಕಿದ್ದಳು.
ಸ್ಕೂಟಿಯನ್ನು ನಿಲ್ಲಿಸಿ ಬ್ಲೇಡ್‌ನಿಂದ ಕೈ ಕೊಯ್ದುಕೊಂಡು ನಾಟಕವಾಡಿದ್ದಳು. ಹಿರಿಯ ಪೊಲೀಸ್ ಅಧಿಕಾರಿಗಳು ಮಂಗಳೂರಿನಿಂದ ದೌಡಾಯಿಸಿ ತನಿಖೆ ನಡೆಸಿದರು. ವಿಚಾರಣೆ ವೇಳೆ ಹುಡುಗಿಯಿಂದಲೇ ಪೊಲೀಸರಿಗೆ ನಿಜ ಮಾಹಿತಿ ಗೊತ್ತಾಗಿದೆ.

Leave a Reply

Your email address will not be published. Required fields are marked *

error: Content is protected !!