ಉದಯವಾಹಿನಿ, ವಿಜಯಪುರ: ವಿಮಾನ ಪತನಗೊಂಡು ಎರಡು ದಿನ ಕಳೆದರೂ ಕೂಡ ಜಮೀನಿನಿಂದ ವಿಮಾನ ತೆಗೆದಿಲ್ಲ. ದುರಂತ ನೋಡಲು ಬಂದ ಜನರು ಜಮೀನಿನಲ್ಲಿದ್ದ ಕಬ್ಬು ತುಳಿದು ಹಾಳು ಮಾಡಿದ್ದಾರೆ. ಅಂದಾಜು 5 ಲಕ್ಷ ರೂ. ಪರಿಹಾರ ನೀಡಿ ಎಂದು ಜಮೀನು ಮಾಲೀಕ ನಿಂಗಪ್ಪ ಅವರು ಅಳಲು ತೋಡಿಕೊಂಡಿದ್ದಾರೆ.
ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದ ರೈತ ನಿಂಬಣ್ಣ ಎಂಬುವವರ ಜಮೀನಿನಲ್ಲಿ ಖಾಸಗಿ ವಿಮಾನ ಪತನ ಆಗಿದೆ. ವಿಮಾನ ಪತನವಾಗಿ ಎರಡು ದಿನ ಕಳೆದರೂ ಇದುವರೆಗೂ ವಿಮಾನವನ್ನ ಜಮೀನಿನಿಂದ ಹೊರತೆಗೆಯಲಾಗಿಲ್ಲ. ಆಯಿಲ್ ಸೋರಿಕೆಯಾಗಿದೆ. ಈ ದುರಂತ ನೋಡಲು ಬಂದ ನೂರಾರು ಜನರು ಜಮೀನಿನಲ್ಲಿದ್ದ ಕಬ್ಬನ್ನು ತುಳಿದು ಹಾಳು ಗೆಡವಿದ್ದಾರೆ. ಒಟ್ಟು 5 ಎಕರೆ ಜಮೀನು ವಿಮಾನ ದುರಂತದಿಂದ ನಾಶವಾಗಿದೆ. ಈಗ ಸಂಪೂರ್ಣ ಜಮೀನು ಶುಚಿಗೊಳಿಸಿ, ಮತ್ತೆ ಕಬ್ಬಿನ ಬೀಜ ಹಾಕಿ, ಬೆಳೆ ಬೆಳೆಯಬೇಕು. ಇದರಿಂದ ಅಂದಾಜು 5 ಲಕ್ಷ ರೂ. ಖರ್ಚಾಗುತ್ತೆ ಎಂದು ಮನವಿ ಮಾಡಿಕೊಂಡಿದ್ದಾರೆ.
