ಉದಯವಾಹಿನಿ, ಬೆಂಗಳೂರು: ಸಿಎಂ-ಡಿಸಿಎಂ ನಡುವೆ ಕುರ್ಚಿ ಗಲಾಟೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ಹೇಳಿದಂತೆ ನಾವೆಲ್ಲ ಶಾಸಕರು ಕೇಳುತ್ತೇವೆ ಅಂತ ಶಾಸಕ ಬಸನಗೌಡ ದದ್ದಲ್ ತಿಳಿಸಿದ್ದಾರೆ.
ಸಿಎಂ-ಡಿಸಿಎಂ ನಡುವೆ ಕುರ್ಚಿ ಗಲಾಟೆ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಡಿಕೆ ಶಿವಕುಮಾರ್‌ಗೆ ಸಿಎಂ ಸ್ಥಾನ ಬಿಟ್ಟು ಕೊಡಿ ಅಂತ ಯಾವ ಶಾಸಕರು ಮಾತಾಡಿದ್ದಾರೋ ಗೊತ್ತಿಲ್ಲ. ಅವರಿಗೆ ಇರೋ ಮಾಹಿತಿ ಏನು ಅಂತ ನಮಗೆ ಗೊತ್ತಿಲ್ಲ. ಏನೇ ಬದಲಾವಣೆ ಆದ್ರು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರು ಬದ್ಧರಾಗಿ ಇರ್ತೀವಿ. ಎಲ್ಲಾ ಶಾಸಕರು ಹೈಕಮಾಂಡ್ ಸೂಚನೆಗೆ ಬದ್ಧರಾಗಿ ಇರುತ್ತೇವೆ ಅಂತ ಸ್ಪಷ್ಟಪಡಿಸಿದರು. ಡಿಕೆ ಶಿವಕುಮಾರ್‌ಗೆ ಸ್ಥಾನ ಬಿಟ್ಟು ಕೊಡಬೇಕು ಅಂತ ಕೆಲವು ಶಾಸಕರು ಹೇಳಬಹುದು. ನಾವೆಲ್ಲರು ಹೈಕಮಾಂಡ್ ಸಿದ್ಧಾಂತದಲ್ಲಿ ಇರೋ ಶಾಸಕರು. ಹೈಕಮಾಂಡ್ ಏನು ಹೇಳ್ತಾರೋ ಕೇಳ್ತೀವಿ ಎಂದರು. ಸಿದ್ದರಾಮಯ್ಯ 5 ವರ್ಷ ಇರ್ತಾರಾ ಎಂಬ ಪ್ರಶ್ನೆಗೆ ಅದರ ಬಗ್ಗೆ ಗೊತ್ತಿಲ್ಲ. ಹೈಕಮಾಂಡ್ ತೀರ್ಮಾನದಂತೆ ಸಿದ್ದರಾಮಯ್ಯ ಇರ್ತಾರೆ. ಹೈಕಮಾಂಡ್ ಹೇಳೋವರೆಗೂ ಸಿದ್ದರಾಮಯ್ಯ ಇರ್ತಾರೆ ಎಂದು ಹೇಳಿದರು.
