ಉದಯವಾಹಿನಿ, ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್‌ ಮಹಿಳಾ ಸದಸ್ಯರು ಪ್ರತಿಭಟನೆ ನಡೆಸಿದ್ದ ವಿಡಿಯೋವನ್ನು ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಕಿರಣ್ ರಿಜಿಜು ಬಿಡುಗಡೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.ಈ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡ ಕಿರಣ್ ರಿಜುಜು ತನ್ನ ಸಂಸದರು ಲೋಕಸಭೆಯಲ್ಲಿ ಪ್ರದರ್ಶಿಸಿದ ಅತ್ಯಂತ ಅವಮಾನಕರ ನಡವಳಿಕೆಯ ಬಗ್ಗೆ ಕಾಂಗ್ರೆಸ್‌ ಹೆಮ್ಮೆಪಡಬೇಕು. ನಾವು ನಮ್ಮ ಬಿಜೆಪಿಯ ಮಹಿಳಾ ಸಂಸದರಿಗೆ ಕಾಂಗ್ರೆಸ್ ಸಂಸದರನ್ನು ಎದುರಿಸಲು ಅವಕಾಶ ನೀಡಿದ್ದರೆ ಅದು ತುಂಬಾ ಕೊಳಕು ದೃಶ್ಯಕ್ಕೆ ಕಾರಣವಾಗುತ್ತಿತ್ತು. ಸಂಸತ್ತಿನ ಘನತೆ ಮತ್ತು ಪಾವಿತ್ರ್ಯವನ್ನು ರಕ್ಷಿಸಲು ನಾವು ಹೆಚ್ಚಿನ ಪ್ರಬುದ್ಧತೆ ಹೊಂದಿದ್ದೇವೆ ಎಂದು ಬರೆದು ಆಕ್ರೋಶ ಹೊರಹಾಕಿದ್ದಾರೆ.

ಕಾಂಗ್ರೆಸ್ ಸಂಸದರ ವರ್ತನೆಯಿಂದ ಬಿಜೆಪಿ ಮತ್ತು ಎನ್‌ಡಿಎ ಸಂಸದರು ತುಂಬಾ ಸಿಟ್ಟಾಗಿದ್ದಾರೆ. ಟ್ರೆಶರಿ ಬೆಂಚ್‌ ದಾಟಿ ಪ್ರಧಾನಿ ಆಸನದ ಬಳಿ ಬಂದು ಅವರು ಪ್ರತಿಭಟಿಸಿದ್ದಾರೆ. ಕಾಂಗ್ರೆಸ್‌ನವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಮಹಿಳಾ ಸಂಸದರು ಪ್ರಧಾನಿಯನ್ನು ಹೆದರಿಸಿದ್ದಾರೆ ಎಂದು ಹೇಳಿಕೊಂಡು ಸಂಭ್ರಮಿಸುತ್ತಿದ್ದಾರೆ. ಆದರೆ ಇದು ಇದು ನಾಚಿಕೆಗೇಡಿನ ಸಂಗತಿ ಎಂದು ಸಿಟ್ಟು ಹೊರಹಾಕಿದ್ದಾರೆ.
ಪ್ರಧಾನಿ ಮೋದಿ ಅವರು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಮಾತನಾಡಬೇಕಿತ್ತು. ಆದರೆ ಮೋದಿ ಭಾಷಣಕ್ಕೂ ಮೊದಲು ಮಹಿಳಾ ಕಾಂಗ್ರೆಸ್‌ ಸಂಸದರು ಮೋದಿ ಕುಳಿತುಕೊಳ್ಳುವ ಕುರ್ಚಿಯ ಮುಂದೆ ಬ್ಯಾನರ್‌ ಹಿಡಿದು ಪ್ರತಿಭಟನೆ ನಡೆಸಿದ್ದರು.

Leave a Reply

Your email address will not be published. Required fields are marked *

error: Content is protected !!