ಉದಯವಾಹಿನಿ, ಒಬ್ಬರ ಜೀವನಾನುಭವವು ಮತ್ತೊಬ್ಬರಿಗೆ ಜ್ಞಾನ ಮಾಹಿತಿ ನೀಡುತ್ತವೆ. ಆದ್ರೆ ಕೆಲವೊಮ್ಮೆ ಅವು ವಿವಾದದ ಅಲೆ ಎಬ್ಬಿಸಿ ಸಂಚಲನವನ್ನೇ ಸೃಷ್ಟಿಸಬಹುದು ಅನ್ನೋದಕ್ಕೆ ತಾಜಾ ಉದಾಹರಣೆ ಈಗ ನಿವೃತ್ತ ಮೇಜರ್‌ ಜನರಲ್‌ ಮನೋಜ್‌ ಮುಕುಂದ್‌ ನರವಣೆ ಅವರ ಅಪ್ರಕಟಿತ ಅತ್ಮಕಥೆ ʻಫೋರ್‌ ಸ್ಟರಾರ್‌ ಆಫ್‌ ಡೆಸ್ಟಿನಿʼ.
ಈ ಪುಸ್ತಕ ಎಂಬ ಆತ್ಮಚರಿತ್ರೆಯನ್ನು ಜನರಲ್‌ ಮನೋಜ್‌ ಮುಕುಂದ್‌ ನರವಣೆ ಅವರು ರಚಿಸಿದ್ದಾರೆ. ಆದ್ರೆ ಇದು ಪ್ರಕಟಗೊಂಡಿಲ್ಲ, ಪುಸ್ತಕವನ್ನ ಸರ್ಕಾರದ ಪರಿಶೀಲನೆಗೆ ಸಲ್ಲಿಸಲಾಗಿದೆ. ಆದ್ರೆ ಭಾರತದಲ್ಲಿ ಪ್ರಕಟಣೆಗೆ ಈವರೆಗೆ ಯಾಕೆ ಅನುಮತಿ ನೀಡಲಾಗಿಲ್ಲ ಅನ್ನೋದಕ್ಕೆ ಉತ್ತರ ದೊರೆತಿಲ್ಲ. ಅಪ್ರಕಟಿತ ಪುಸ್ತಕದ ಆಯ್ದ ಭಾಗಗಳನ್ನ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಸದನದಲ್ಲಿ ಪ್ರಸ್ತಾಪಿಸುವುದಕ್ಕೂ ಅನುಮತಿ ನಿರಾಕರಿಸಲಾಗಿದೆ. ಇದೇ ವಿಚಾರಕ್ಕೆ ಸದನದಲ್ಲಿ ಅಡಚಣೆ ಉಂಟುಮಾಡಿದ ಆರೋಪದಲ್ಲಿ 8 ಸಂಸದರನ್ನ ಸದನದಿಂದ ಅಮಾನತುಗೊಳಿಸಿರುವುದು ವಿವಾದವನ್ನ ಮಾತ್ರ ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ.

ಅಲ್ಲದೇ ನರವಣೆ ಅವರ ಅಪ್ರಕಟಿತ ಆತ್ಮಚರಿತ್ರೆ ಕೃತಿಯನ್ನು ಸೋಷಿಯಲ್‌‌ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿರುವ ಬಗ್ಗೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ನಡುವೆ ʻಫೋರ್‌ ಸ್ಟಾರ್‌ ಆಫ್‌ ಡೆಸ್ಟಿನಿʼನ ಪ್ರಕಾಶನದ ಹಕ್ಕುಗಳನ್ನು ಹೊಂದಿರುವ ಪೆಂಗ್ವಿನ್‌ ರ‍್ಯಾಂಡಮ್‌ ಹೌಸ್‌ ಇಂಡಿಯಾ ಪುಸ್ತಕ ಇನ್ನೂ ಪ್ರಕಟಣೆಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಪುಸ್ತಕದ ಡಿಜಿಟಲ್‌ ಪ್ರತಿಗಳನ್ನು, ಪ್ರಕಟಣೆ ಅಥವಾ ವಿತರಣೆ ಮಾರಾಟ ಅಥವಾ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿಲ್ಲ ಎಂದು ಪ್ರಕಾಶಕರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!