ಉದಯವಾಹಿನಿ, ಜಬಲ್ಪುರ್​ (ಮಧ್ಯಪ್ರದೇಶ): ದೇಶದಲ್ಲಿ 75 ವರ್ಷಗಳ ಹಿಂದೆ ಚೀತಾಗಳು ಅಳಿದು ಹೋಗಿದೆ. ದೇಶದಲ್ಲಿ ಮತ್ತೆ ಚೀತಾಗಳ ಆವಾಸಸ್ಥಾನ ಪರಿಚಯಿಸುವ ಉದ್ದೇಶದಿಂದ ಸರ್ಕಾರ ಇತ್ತೀಚಿಗೆ ಅವುಗಳನ್ನು ವಿದೇಶದಿಂದ ಕರೆ ತರುವ ಪ್ರಯತ್ನ ಮಾಡಿದೆ. ಈ ನಡುವೆ ಜಬಲ್ಪುರದ ರಾಬರ್ಟ್‌ಸನ್ ವಿಜ್ಞಾನ ಕಾಲೇಜಿನಲ್ಲಿ ಚೀತಾದ ಅಸ್ಥಿಪಂಜರವನ್ನು ಇನ್ನೂ ಸಂರಕ್ಷಿಸಲಾಗಿದೆ ಎಂದು ತಿಳಿದರೆ ಆಶ್ಚರ್ಯವಾಗಬಹುದು. ಚೀತಾ ಮಾತ್ರವಲ್ಲದೇ ಈ ಸಂಗ್ರಹಾಲಯವು 700ಕ್ಕೂ ಹೆಚ್ಚು ಪ್ರಾಣಿಗಳ ಅಸ್ಥಿಪಂಜರಗಳು, ಪಕ್ಷಿ ಕಲಾಕೃತಿಗಳು ಮತ್ತು ಇತರ ಆಕರ್ಷಕ ಪ್ರದರ್ಶನಗಳನ್ನು ಒಳಗೊಂಡಿವೆ.
1873ರಲ್ಲಿ ಈ ಕಾಲೇಜನ್ನು ಬ್ರಿಟಿಷರು ಸ್ಥಾಪಿಸಿದರು. ಇದನ್ನು ಮೂಲತಃ ಸಾಗರದಲ್ಲಿ 1836ರಲ್ಲಿ ಸ್ಥಾಪಿಸಲಾಗಿತ್ತು. ಬಳಿಕ 1873ರಲ್ಲಿ ಜಬಲ್ಫುರಕ್ಕೆ ಸ್ಥಳಾಂತರಗೊಳಿಸಲಾಯಿತು. ಬ್ರಿಟಿಷರು ಸ್ಥಾಪಿಸಿದ ಈ ವಿಜ್ಞಾನ ಕಾಲೇಜು ಇಂದಿಗೂ ಕೂಡ ಮಧ್ಯಪ್ರದೇಶದಲ್ಲಿ ಅತ್ಯುತ್ತಮ ವಿಜ್ಞಾನ ಶಿಕ್ಷಣವನ್ನು ನೀಡುತ್ತಿದೆ. ಈ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಈ ವಸ್ತು ಸಂಗ್ರಹಾಲಯ ಇದೆ.
ಪ್ರಸ್ತುತ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಡಾ ಸುನೀತಾ ಶರ್ಮಾ ಅವರು ಮಾತನಾಡಿ, ಈ ಕಾಲೇಜಿನಲ್ಲಿ 1957ರಲ್ಲಿ ಸಂಗ್ರಹಾಲಯ ಪ್ರಾರಂಭಿಸಲಾಯಿತು. ಆದರೆ, ವಸ್ತು ಸಂಗ್ರಹಾಲಯದಲ್ಲಿರುವ ಕೆಲವು ಪ್ರಾಣಿಗಳ ಅಸ್ಥಿಪಂಜರವನ್ನು ಈ ಮೊದಲೇ ಸಂಗ್ರಹಿಸಿದ್ದಾಗಿದ್ದು, ಅವು ಪುರಾತನದ್ದಾಗಿದೆ ಎಂದರು.

ಇಲ್ಲಿರುವುದು ಭಾರತೀಯ ಮೂಲದ ಚೀತಾದ ಅಸ್ಥಿಪಂಜರ: ಇದೀಗ ದಕ್ಷಿಣ ಆಫ್ರಿಕಾದ ನಮೀಬಿಯಾದಿಂದಾಗಿ ಈ ಚೀತಾಗಳನ್ನು ಕರೆತಂದು, ದೇಶದಲ್ಲಿ ಮರು ಪರಿಚಯಿಸಲಾಗಿದೆ. ಆದರೆ, ಇಲ್ಲಿ ಸಂಗ್ರಹಾಲಯದಲ್ಲಿರುವುದು ಭಾರತೀಯ ಚೀತಾದ ಮೂಳೆಗಳಾಗಿವೆ. ಚೀತಾದ ಉಗುರುಗಳಿಂದ ಹಿಡಿದು ಹಲ್ಲುಗಳವರೆಗೆ ಎಲ್ಲವನ್ನೂ ಸಂರಕ್ಷಿಸಲಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!