ಉದಯವಾಹಿನಿ, ಲಂಡನ್‌: ಎಪ್ಸ್ಟೀನ್ ಫೈಲ್‌ಗಳ ವಿವಾದ ಜಗತ್ತಿನಾದ್ಯಂತ ಸುದ್ದಿಯಲ್ಲಿದೆ. ಈಗಾಗಲೇ ಈ ಲೈಂಗಿಕ ಹಗರಣದಲ್ಲಿ ಹಲವು ಗಣ್ಯರ ಹೆಸರು ಕೇಳಿ ಬಂದಿದ್ದು, ಹಲವು ಫೋಟೋಗಳನ್ನು ಸಹ ರಿಲೀಸ್‌ ಮಾಡಲಾಗಿದೆ. ಇದೀಗ ಈ ಹಗರಣದಲ್ಲಿ ಇದೀಗ ಪ್ರಧಾನ ಮಂತ್ರಿ ಕೀರ್ ಸ್ಟಾರ್ಮರ್ ಅವರ ಆಪ್ತರ ಹೆಸರು ಕೇಳಿ ಬಂದಿದ್ದು, ಅವರು ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ. ಕೀರ್ ಸ್ಟಾರ್ಮರ್ ತಮ್ಮ ಮಾಜಿ ಲೇಬರ್ ಸಹೋದ್ಯೋಗಿ ಪೀಟರ್ ಮ್ಯಾಂಡೆಲ್ಸನ್ ಅವರನ್ನು ಅಮೆರಿಕದ ರಾಯಭಾರಿಯಾಗಿ ನೇಮಿಸಿದ್ದಕ್ಕಾಗಿ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗುತ್ತಿದೆ. ಯಾವುದೇ ವೈಯಕ್ತಿಕ ತಪ್ಪು ಮಾಡದಿದ್ದರೂ, ಸ್ಟಾರ್ಮರ್ ಅವರ ನಾಯಕತ್ವವನ್ನು ಈಗ ಪ್ರಶ್ನಿಸಲಾಗಿದೆ, ಹಲವಾರು ಲೇಬರ್ ಶಾಸಕರು ಅವರು ರಾಜೀನಾಮೆ ನೀಡಬೇಕೆಂದು ಕರೆ ನೀಡಿದ್ದಾರೆ.

ಹೆಚ್ಚುತ್ತಿರುವ ಒತ್ತಡದ ನಡುವೆ, ಪ್ರಧಾನ ಮಂತ್ರಿಗಳ ಮುಖ್ಯಸ್ಥರು ಮತ್ತು ಸಂವಹನ ನಿರ್ದೇಶಕರು ರಾಜೀನಾಮೆ ನೀಡಿ, ಸ್ಟಾರ್ಮರ್‌ಗೆ ಮ್ಯಾಂಡೆಲ್ಸನ್ ಅವರನ್ನು ನೇಮಿಸುವಂತೆ ಸಲಹೆ ನೀಡಿದ್ದಕ್ಕಾಗಿ ಅವರ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಬ್ರಿಟನ್‌ನ ಗೃಹ ಕಾರ್ಯದರ್ಶಿ ಶಬಾನಾ ಮಹಮೂದ್ ಅವರನ್ನು ಮುಂದಿನ ಪ್ರಧಾನಿಯನ್ನಾಗಿ ನೇಮಿಸುವಂತೆ ಪಕ್ಷದೊಳಗೇ ಕೂಗು ಕೇಳಿ ಬಂದಿದೆ.ಮಹಮೂದ್ ಅವರು ಪೊಲೀಸ್, ವಲಸೆ ಮತ್ತು ರಾಷ್ಟ್ರೀಯ ಭದ್ರತೆಗೆ ಜವಾಬ್ದಾರರಾಗಿರುವ ಗೃಹ ಕಚೇರಿಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಮುಸ್ಲಿಂ ಮಹಿಳೆ. ಅವರು ಸೆಪ್ಟೆಂಬರ್ 17, 1980 ರಂದು ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ಜನಿಸಿದ್ದಾರೆ. ಇವರ ಮೂಲ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಆಗಿದ್ದು, ಪೋಷಕರು ಅಲ್ಲಿಯವರೇ ಎಂದು ಹೇಳಲಾಗಿದೆ. ಅವರು ಆಕ್ಸ್‌ಫರ್ಡ್‌ನ ಲಿಂಕನ್ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!