ಉದಯವಾಹಿನಿ, ಲಖನೌ: ಜ್ಞಾನವಾಪಿ ಮಸೀದಿ ಆವರಣ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ)ಯಿಂದ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ವಾರಾಣಸಿ ಜಿಲ್ಲಾ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ನೀಡಿದ್ದ ತಡೆಯನ್ನು ಅಲಹಾಬಾದ್ ಹೈಕೋರ್ಟ್ ಗುರುವಾರದ ವರೆಗೆ ವಿಸ್ತರಿಸಿದೆ.
ಹಿಂದೂಗಳು, ಅಂಜುಮಾನ್ ಇಂತೆ
ಜಾಮಿಯಾ ಮಸೀದಿ ಸಮಿತಿ ಹಾಗೂ ಎಎಸ್‌ಐ ಪರ ವಕೀಲರ ವಾದಗಳನ್ನು ಬುಧವಾರ ಆಲಿಸಿದ ನ್ಯಾಯಾಲಯ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು. ‘ವೈಜ್ಞಾನಿಕ ಸಮೀಕ್ಷೆಯಿಂದ ಮಸೀದಿ ಕಟ್ಟಡಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಎಂಬುದಾಗಿ ನ್ಯಾಯಾಲಯಕ್ಕೆ ಎಎಸ್‌ಐ ಪ್ರಮಾಣಪತ್ರ ಸಲ್ಲಿಸಿದೆ’ ಎಂದು ಹಿಂದೂ ಅರ್ಜಿದಾರರ ಪರ ವಕೀಲ ವಿಷ್ಣು ಶಂಕರ ಜೈನ್ ತಿಳಿಸಿದ್ದಾರೆ. ಆದರೆ, ಸಮೀಕ್ಷೆಯಿಂದ ಕಟ್ಟಡಕ್ಕೆ ಹಾನಿಯಾಗಲಿದೆ ಎಂಬ ಆತಂಕವನ್ನು ಸಮಿತಿ ಪರ ಹಾಜರಿದ್ದ ವಕೀಲರು ವ್ಯಕ್ತಪಡಿಸಿದ್ದಾರೆ.
