ಉದಯವಾಹಿನಿ, ಈಗಿನ ಕಾಲದಲ್ಲಿ ಅಕ್ಕಿಯಿಂದ ಮಾಡುವ ಅನ್ನ ತಿನ್ನದೇ ಬದುಕುವುದಕ್ಕೆ ಆಗೋದೇ ಇಲ್ಲ. ಏಕೆಂದರೆ ನಾವೆಲ್ಲ ರಾಗಿ, ಜೋಳ, ಸಜ್ಜೆ, ನವಣೆ ಇತ್ಯಾದಿಗಳಿಗಿಂತ ಹೆಚ್ಚು ಹೆಚ್ಚು ಭತ್ತವನ್ನು ಅವಲಂಬಿಸಿದ್ದೇವೆ. ಭಾರತದಲ್ಲಿ ಭತ್ತ ಹಲವು ಬಗೆಗಳಲ್ಲಿ ಉತ್ಪಾದನೆ ಮಾಡಲಾಗುತ್ತಿದ್ದು 50 ರೂಪಾಯಿಯಿಂದ ಅಕ್ಕಿಯ ಬೆಲೆ ಆರಂಭವಾಗುತ್ತದೆ. ಅಕ್ಕಿಯಲ್ಲೇ ಅತ್ಯಂತ ದುಬಾರಿ ಅಕ್ಕಿ ಇದೆ. ಇದರ ಬೆಲೆ ಕೇಳಿದ್ರೆ, ಇಷ್ಟೊಂದು ಹಣ ಕೊಟ್ಟು ಯಾರಾದರೂ ಖರೀದಿ ಮಾಡ್ತಾರಾ ಎನ್ನುವ ಪ್ರಶ್ನೆ ನಿಮ್ಮಲ್ಲೂ ಮೂಡಬಹುದು.

ಕಿನ್‌ಮೆಮೈ ಪ್ರೀಮಿಯಂ ಅಕ್ಕಿ ವಿಶ್ವದಲ್ಲಿಯೇ ಅತ್ಯಂತ ದುಬಾರಿ ಅಕ್ಕಿಯಾಗಿದೆ. ಇದು ಕೇವಲ ಬೆಲೆಯಿಂದ ಮಾತ್ರವಲ್ಲ, ಇದನ್ನು ಬೆಳೆಯುವ ವಿಧಾನ ಹಾಗೂ ಇದು ಹೊಂದಿದ ವಿಶಿಷ್ಟ ವಾಸನೆಯೂ ಆಕರ್ಷಣೆಯಾಗಿರುತ್ತದೆ. ಅಲ್ಲದೇ 2016ರಲ್ಲಿ ವಿಶ್ವದ ಅತ್ಯಂತ ದುಬಾರಿ ಅಕ್ಕಿ ಎಂದು ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿದೆ. ಈ ಅಕ್ಕಿ ಎಲ್ಲಿ ಸಿಗುತ್ತದೆ ಎಂದರೆ ಜಪಾನ್‌ನಲ್ಲಿ. ಇದರ ಬೆಲೆ ಈ ಮುಂದಿನಂತೆ ಇದೆ. ಜಪಾನ್‌ನ ಕಿನ್‌ಮೆಮೈ ಪ್ರೀಮಿಯಂ ಅಕ್ಕಿಯ 840 ಗ್ರಾಂ ಬಾಕ್ಸ್‌ನ ಬೆಲೆ 10,800 ಯೆನ್ ಆಗಿದೆ. ಅಂದರೆ ಭಾರತದ ರೂಪಾಯಿಗಳಲ್ಲಿ ಹೇಳುವುದಾದರೆ ಈ ಅಕ್ಕಿಯ ಬೆಲೆ 6,000 ದಿಂದ 7,000 ರೂಪಾಯಿಗಳವರೆಗೆ ಇದೆ. ಸದ್ಯ ಈ ಅಕ್ಕಿಯ ದರ ವಿವಿಧ ಮಾರುಕಟ್ಟೆಗಳಲ್ಲಿ ಪ್ರತಿ ಕೆ.ಜಿಗೆ 12,500 ದಿಂದ 15,000 ವರೆಗೆ ಇರುತ್ತದೆ. ಈ ಅಕ್ಕಿಯನ್ನು ಅನ್ನ ಮಾಡಬೇಕಾದರೆ ತೊಳೆಯುವ ಅವಶ್ಯಕತೆಯೇ ಇರುವುದಿಲ್ಲ.

ಜಪಾನಿನ ಟೊಯೊ ರೈಸ್ ಕಾರ್ಪೊರೇಷನ್ ಕಂಪನಿ ಮಾತ್ರ ಜಪಾನ್‌ನ ಕಿನ್‌ಮೆಮೈ ಪ್ರೀಮಿಯಂ ಅಕ್ಕಿಯನ್ನು ಉತ್ಪಾದನೆ ಮಾಡುತ್ತದೆ. ಈ ಅಕ್ಕಿ ಅಧಿಕ ಪೌಷ್ಟಿಕಾಂಶ ಹೊಂದಿರುತ್ತದೆ. ಅಂದರೆ ಸಾಮಾನ್ಯ ಅಕ್ಕಿಗಿಂತ ಆರು ಪಟ್ಟು ಅಧಿಕ ಲಿಪೊಪೊಲಿಸ್ಯಾಕರೈಡ್‌ಗಳನ್ನು ಹೊಂದಿರುತ್ತದೆ. ದೇಹದಲ್ಲಿ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಜಪಾನಿನ ವಿಶೇಷ ಸ್ಥಳಗಳಲ್ಲಿ ಈ ಭತ್ತವನ್ನು ಬೆಳೆಯಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!