ಉದಯವಾಹಿನಿ, ಚೀಸ್‌ನಲ್ಲಿಯೂ ಹಲವಾರು ವಿಧಗಳಿವೆ. ಇದರಲ್ಲಿ ಕೆಲವರು ಕ್ರೀಮಿ ಚೀಸ್ ಇಷ್ಟಪಟ್ಟರೇ, ಇನ್ನು ಕೆಲವರು ಕೊಬ್ಬು ರಹಿತ ಹಾಗೂ ಟೋಫು ಚೀಸ್‌ ಇಷ್ಟಪಡುತ್ತಾರೆ. ವಿಶ್ವದಲ್ಲಿಗ ಚೀಸ್‌ ಪ್ರಿಯರಿಗೇನು ಕೊರತೆಯಿಲ್ಲ. ಚೀಸ್‌ನಲ್ಲಿ ಪ್ರೋಟೀನ್ ಮತ್ತು ಪೌಷ್ಟಿಕಾಂಶದಿಂದ ಸಮೃದ್ಧವಾಗಿರುತ್ತೆ ಜೊತೆಗೆ ರುಚಿಕರವಾಗಿರುತ್ತದೆ. ಮಾರ್ಕೆಟ್‌ನಲ್ಲಿ ಒಳ್ಳೇಯ ಚೀಸ್ ಕೆಜಿಗೆ 400 ರಿಂದ 600 ರೂಪಾಯಿಗಳವರೆಗೆ ಇದೆ. ಆದರೆ ಇಲ್ಲೊಂದು ಚೀಸ್‌ ಇದ್ದು ಇದನ್ನು ಯಾವುದರ ಹಾಲಿನಿಂದ ತಯಾರಿಸುತ್ತಾರೆ, ಇದರ ಬೆಲೆ ಎಷ್ಟು ಎಂದು ಗೊತ್ತಾದ್ರೆ ತಲೆ ಗಿರ್‌ರ್‌ ಎನ್ನುತ್ತದೆ.

ವಿಶೇಷ ಚೀಸ್‌ ಅನ್ನು ಪುಲ್ ಚೀಸ್ ಎಂದು ಕರೆಯಲಾಗುತ್ತೆ. ಇದನ್ನು ವಿಶ್ವದಲ್ಲಿಯೇ ಅಂತ್ಯಂತ ದುಬಾರಿ ಎಂದು ಹೇಳಲಾಗುತ್ತದೆ. ಏಕೆಂದರೆ ಕತ್ತೆ ಹಾಲಿನಿಂದ ಇದನ್ನು ತಯಾರು ಮಾಡಲಾಗುತ್ತದೆ. ಕತ್ತೆ ದಿನಕ್ಕೆ ಕೇವಲ 300 ರಿಂದ 500 ಮಿಲಿ ಮಾತ್ರ ಹಾಲು ಕೊಡುತ್ತದೆ. 1 ಕೆಜಿ ಪುಲ್ ಚೀಸ್ ತಯಾರು ಮಾಡಲು ಸುಮಾರು 25 ಲೀಟರ್ ಹಾಲು ಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಹಣ ಖರ್ಚು ಆಗುತ್ತದೆ. ಆದರೂ ಇದರ ಟೇಸ್ಟ್‌ ಮಾಡಿದವರು ಈ ಚೀಸ್ ಕೆನೆಯಂತಹ ಸ್ವಲ್ಪ ಸಿಹಿ ರುಚಿ ಹೊಂದಿದೆ ಎನುತ್ತಾರೆ.

ಈ ಪುಲ್ ಚೀಸ್ ಅನ್ನು ಯೂರೋಪ್‌ನ ಸೆರ್ಬಿಯಾದ ಜಸಾವಿಕಾ ಎನ್ನುವಲ್ಲಿ ತಯಾರು ಮಾಡಲಾಗುತ್ತದೆ. ಈ ಷೀಸ್‌ಗಾಗಿ ಅಲ್ಲಿನವರು ಬಾಲ್ಕನ್ ಕತ್ತೆಗಳನ್ನು ಸಾಕಾಣಿಕೆ ಮಾಡಿ ಅವುಗಳ ಹಾಲಿನಿಂದ ಅತ್ಯುತ್ತಮವಾದ ಚೀಸ್‌ ತಯಾರಿಸುತ್ತಾರೆ. ಕತ್ತೆಗಳು ಕೇವಲ 6 ತಿಂಗಳು ಮಾತ್ರ ಹಾಲು ಕೊಡುತ್ತವೆ. ಆ ಮೇಲೆ ಕನಿಷ್ಠ 1 ವರ್ಷದವರೆಗೆ ಮತ್ತೆ ಹಾಲು ಕೊಡವುದಿಲ್ಲ. ಕತ್ತೆ ಹಾಲಿನಲ್ಲಿ ಕಡಿಮೆ ಕ್ಯಾಸೀನ್‌ ಇರುವುದರಿಂದ ಚೀಸ್‌ ಮಾಡಲು ಒಳ್ಳೆಯದಲ್ಲ. ಆದ್ದರಿಂದ ಇದರಲ್ಲಿ ಮೇಕೆ ಹಾಲನ್ನು ಬಳಸಲಾಗುತ್ತದೆ.

ಯಾವುದೇ ಪುಲ್‌ ಚೀಸ್‌ ಶೇಕಡಾ 60 ರಷ್ಟು ಕತ್ತೆ ಹಾಲು ಹೊಂದಿದ್ರೆ ಶೇಕಡಾ 40 ರಷ್ಟು ಮೇಕೆ ಹಾಲನ್ನು ಒಳಗೊಂಡಿರುತ್ತದೆ. ಕತ್ತೆಯ ಹಾಲು ಅತ್ಯಂತ ಹೆಚ್ಚು ವಿಟಮಿನ್ ಸಿ, ಪ್ರೋಟೀನ್ ಹಾಗೂ ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ. ಹೀಗಾಗಿಯೇ ಈಗೀಗ ಕತ್ತೆಯ ಹಾಲನ್ನು ರೋಗನಿರೋಧಕ ಶಕ್ತಿ ವರ್ಧಕ ಹಾಗೂ ಚರ್ಮಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಪುಲ್ ಚೀಸ್ ಉತ್ಪಾದನೆ ಕಡಿಮೆಯಾಗಿದ್ದರೂ, ಯುರೋಪ್ ಮತ್ತು ಮಧ್ಯಪ್ರಾಚ್ಯದಲ್ಲಿ ಇದರ ಬೇಡಿಕೆ ಹೆಚ್ಚಾಗಿದೆ. 2025 ರಲ್ಲಿ ಪುಲ್‌ ಚೀಸ್‌ ಬೆಲೆ ಪ್ರತಿ ಕೆಜಿ 95,000 ದಿಂದ 95,000 ರೂಪಾಯಿ ಆಗಿತ್ತು. ಆದ್ರೆ ಈಗ 1.10 ಲಕ್ಷ ರೂಪಾಯಿಗಳು ಆಗಿದೆ.

Leave a Reply

Your email address will not be published. Required fields are marked *

error: Content is protected !!