ಉದಯವಾಹಿನಿ, ಇಂಗು-ತೆಂಗು ಇದ್ರೆ ಮಂಗ ಕೂಡ ಅಡುಗೆ ಮಾಡುತ್ತೆ” ಅನ್ನೋ ಗಾದೆ ಸುಮ್ನೆ ಬಂದಿಲ್ಲ. ನಮ್ಮ ಅಡುಗೆಮನೆಯಲ್ಲಿ ತೆಂಗಿನಕಾಯಿ ಇದ್ರೆ ಸಾಕು, ಸಾಂಬಾರ್ ನಿಂದ ಸ್ವೀಟ್ಸ್‌ವರೆಗೂ ಏನು ಬೇಕಾದ್ರೂ ರೆಡಿ ಮಾಡ್ಬೋದು. ತೆಂಗು ಕೇವಲ ಒಂದು ಪದಾರ್ಥ ಅಲ್ಲ, ಅದು ನಮ್ಮ ಭಾರತೀಯ ಅಡುಗೆ ಪದ್ಧತಿಯ ಜೀವಾಳ. ಇದರಲ್ಲಿರುವ ಆರೋಗ್ಯಕರ ಕೊಬ್ಬು ಮತ್ತು ನಾರಿನಂಶ ನಮ್ಮ ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಗೆ ಬೂಸ್ಟ್ ನೀಡುತ್ತೆ. ಈಗ ಖುಷಿಯ ವಿಚಾರ ಏನಂದ್ರೆ, ಫೇಮಸ್ ಫುಡ್ ಗೈಡ್ ‘ಟೇಸ್ಟ್ ಅಟ್ಲಾಸ್’, ತೆಂಗಿನಕಾಯಿ ಬಳಸಿ ಮಾಡೋ ಜಗತ್ತಿನ ಟಾಪ್ 100 ಡಿಶ್ ಪಟ್ಟಿ ಬಿಡುಗಡೆ ಮಾಡಿದೆ. ಇ
ದಕ್ಷಿಣ ಭಾರತದಲ್ಲಿ ಬೆಳಗ್ಗೆ ಎದ್ದ ತಕ್ಷಣ ನೆನಪಾಗೋದೇ ಇಡ್ಲಿ-ದೋಸೆ ಮತ್ತು ಕಾಯಿ ಚಟ್ನಿ. ಹಸಿಮೆಣಸಿನಕಾಯಿ, ಶುಂಠಿ, ಒಗ್ಗರಣೆ ಹಾಕಿ ರುಬ್ಬಿದ ಫ್ರೆಶ್ ತೆಂಗಿನಕಾಯಿ ಚಟ್ನಿ ಇದ್ರೆ ಎಷ್ಟೇ ಇಡ್ಲಿ ಇದ್ರೂ ಖಾಲಿ ಆಗುತ್ತೆ. ಇನ್ನು ಕೇರಳದ ಕಡೆ ಹೋದರೆ ‘ಅಪ್ಪಂ’ ಸಿಗುತ್ತೆ. ಅಕ್ಕಿ ಹಿಟ್ಟು ಮತ್ತು ತೆಂಗಿನ ಹಾಲಿನಿಂದ ಮಾಡೋ ದೋಸೆ ತರಹದ ಈ ತಿನಿಸು, ಹತ್ತಿಯಷ್ಟು ಸಾಫ್ಟ್ ಇರುತ್ತೆ. ಇದಕ್ಕೆ ತೆಂಗಿನಕಾಯಿ ಸ್ಟ್ಯೂ ಇದ್ರೆ ಸ್ವರ್ಗ!
ಸಿಹಿ-ಖಾರ ಅಂದ್ರೆ ಹೀಗಿರಬೇಕು!: ಸಿಹಿ ಇಷ್ಟ ಪಡೋರಿಗೆ ‘ಕೊಝುಕ್ಕಟ್ಟ’ ಬೆಸ್ಟ್ ಆಪ್ಷನ್. ಅಕ್ಕಿ ಹಿಟ್ಟಿನ ಉಂಡೆಯೊಳಗೆ ಬೆಲ್ಲ ಮತ್ತು ಕಾಯಿ ತುರಿ ತುಂಬಿ ಬೇಯಿಸೋ ಈ ಡಿಶ್ ಸಖತ್ ಟೇಸ್ಟಿ. ಇನ್ನು ಖಾರ ಪ್ರಿಯರಿಗೆ ಹೈದರಾಬಾದ್ ಸ್ಪೆಷಲ್ ‘ಮಿರ್ಚಿ ಕಾ ಸಾಲನ್’ ಇದೆ. ದಪ್ಪ ಮೆಣಸಿನಕಾಯಿ, ಶೇಂಗಾ ಮತ್ತು ಕಾಯಿ ಪೇಸ್ಟ್ ಹಾಕಿ ಮಾಡೋ ಈ ಗ್ರೇವಿ ಬಿರಿಯಾನಿ ಜೊತೆ ಸೂಪರ್ ಕಾಂಬಿನೇಷನ್.
ಕೇರಳದ ಕಂಪು, ಬಾಯಲ್ಲಿ ನೀರೂರಿಸೋ ತಿನಿಸು!
ಕೇರಳ ಅಂದ್ರೆನೇ ತೆಂಗಿನ ಮರಗಳ ತವರು. ಇಲ್ಲಿನ ‘ಅವಿಯಲ್’ ತುಂಬಾ ಫೇಮಸ್. ಹತ್ತಾರು ತರಕಾರಿ ಮತ್ತು ಕಾಯಿ ಮಸಾಲೆ ಹಾಕಿ ಮಾಡೋ ಈ ಪಲ್ಯ ಇಲ್ಲದೆ ಅಲ್ಲಿನ ಹಬ್ಬಗಳು ನಡೆಯಲ್ಲ. ಹಾಗೇನೇ ‘ಕಲ್ಲಪ್ಪಂ’ ಕೂಡ ಅಲ್ಲಿನ ಬ್ರೇಕ್‌ಫಾಸ್ಟ್ ಸ್ಪೆಷಲ್. ಕುಂಬಳಕಾಯಿ ಮತ್ತು ಬೇಳೆ ಹಾಕಿ ಮಾಡೋ ‘ಏರಿಸ್ಸೇರಿ’ ಅಂತೂ ಅನ್ನದ ಜೊತೆ ಕಲಸಿಕೊಂಡು ತಿಂತಿದ್ರೆ ರುಚಿ ಅದ್ಭುತ!
ನಮ್ಮ ಕರ್ನಾಟಕದ ರುಚಿಯೇ ಬೇರೆ!
ನಮ್ಮ ಕರುನಾಡಿನ ಸ್ಪೆಷಲ್ ಅಂದ್ರೆ ‘ಅನಾನಸ್ ಗೊಜ್ಜು’ ಮತ್ತು ‘ಬೆಂಡೆಕಾಯಿ ಗೊಜ್ಜು’. ಮದುವೆ ಊಟದಲ್ಲಿ ಎಲೆಯ ಬಲಬದಿಗೆ ಬಡಿಸೋ ಈ ಗೊಜ್ಜುಗಳು ಸಿಹಿ-ಹುಳಿ-ಖಾರ ಮಿಕ್ಸ್ ಆಗಿ ನಾಲಿಗೆಗೆ ಹಬ್ಬ ನೀಡುತ್ತೆ. ಅನಾನಸ್ ಮತ್ತು ಬೆಂಡೆಕಾಯಿ ಜೊತೆ ಕಾಯಿ ಮಸಾಲೆ ಬೆರೆತರೆ ಅದರ ಮಜಾನೇ ಬೇರೆ. ಇನ್ನು ಸಿಂಪಲ್ ಆಗಿ ಪಟಾಪಟ್ ಅಂತ ಮಾಡೋ ‘ತೆಂಗಿನಕಾಯಿ ಅನ್ನ’ (Coconut Rice) ಯಾರಿಗೆ ಇಷ್ಟ ಇಲ್ಲ ಹೇಳಿ? ಬಿಸಿ ಬಿಸಿ ಅನ್ನಕ್ಕೆ ಕಾಯಿ ತುರಿ, ಒಗ್ಗರಣೆ ಬಿದ್ರೆ ಆಹಾ!
