ಉದಯವಾಹಿನಿ, ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿ ಕದನದ ಬಗ್ಗೆ ಈ ತಿಂಗಳಾಂತ್ಯದೊಳಗೆ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳೋ ಸಾಧ್ಯತೆಗಳಿವೆ. ಸಿಎಂ ಹಾಗೂ ಡಿಸಿಎಂಗೆ ಈ ತಿಂಗಳಾಂತ್ಯಕ್ಕೆ ಬುಲಾವ್ ನೀಡೋ ಸಾಧ್ಯತೆಗಳಿವೆ. ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳೋದಾಗಿ ಹೈಕಮಾಂಡ್ ಭರವಸೆ ನೀಡಿದೆ. ಈ ಮಧ್ಯೆ, ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ಸಂದೇಶ ರವಾನಿಸಿದೆ. ಎಲ್ಲರೂ ಬಾಯಿ ಮುಚ್ಚಿಕೊಂಡಿರಲು ಸೂಚನೆ ಕೊಟ್ಟಿದೆ ಅಂತ ಗೃಹ ಸಚಿವ ಪರಮೇಶ್ವರ್ ಹೇಳಿದ್ಧಾರೆ.
ಅಕ್ಕ-ಪಕ್ಕದಲ್ಲಿ ಕುಳಿತರೂ ಮಾತನಾಡದ ಸಿದ್ದು, ಡಿಕೆಶಿ  ಇನ್ನೂ ರಾಜ್ಯದಲ್ಲಿ ಕುರ್ಚಿ ಕದನ ಜೋರಾಗ್ತಿದ್ದಂತೆ ಸಿಎಂ – ಡಿಸಿಎಂ (CM – DCM) ನಡುವೆ ಮುನಿಸು ಜೋರಾಯ್ತಾ ಅನ್ನೋ ಪ್ರಶ್ನೆ ಕೂಡ ಎದ್ದಿದೆ. ಇದಕ್ಕೆ ವಿಡಿಯೋವೊಂದು ಪುಷ್ಟಿ ನೀಡಿದಂತಿದೆ. ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ-2026 ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್‌ – ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಒಂದೇ ವೇದಿಕೆಯಲ್ಲಿ ಅಕ್ಕ-ಪಕ್ಕದಲ್ಲೇ ಕುಳಿತಿದ್ದರೂ ಒಬ್ಬರಿಗೊಬ್ಬರು ಮಾತನಾಡಲಿಲ್ಲ. ಹೀಗಾಗಿ ಇಬ್ಬರು ನಾಯಕರ ನಡುವೆ ಮುನಿಸು ಜೋರಾಗಿದೆಯೇ ಅನ್ನೋ ಪ್ರಶ್ನೆ ತಲೆದೂರಿದೆ.

 

Leave a Reply

Your email address will not be published. Required fields are marked *

error: Content is protected !!