ಉದಯವಾಹಿನಿ, ಅಸ್ಸಾಂನ ವಿಧಾನಸಭಾ ಚುನಾವಣೆಯಲ್ಲಿ 126 ಸ್ಥಾನಗಳಲ್ಲಿ ಬಿಜೆಪಿ (BJP) 70-80 ಸ್ಥಾನಗಳನ್ನು ಗೆಲ್ಲಲಿದೆ ಎಂದು ಆಕ್ಸಿಸ್ ಮೈ ಇಂಡಿಯಾ ಭವಿಷ್ಯ ಚುನಾವಣೋತ್ತರ ಸಮಿಕ್ಷೆ ಭವಿಷ್ಯ ನುಡಿದಿದೆ.
ಈ ಮೂಲಕ ಆಡಳಿತರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಅಸ್ಸಾಂನಲ್ಲಿ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದೆ. ಬಿಜೆಪಿ-ಎಜಿಪಿ-ಬಿಪಿಎಫ್ ಮೈತ್ರಿಕೂಟ 88 ರಿಂದ 100 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ 24 ರಿಂದ 36 ಸ್ಥಾನಗಳನ್ನು ಗೆಲ್ಲಲಿದೆ. ಎಜಿಪಿ 7-9 ಸ್ಥಾನಗಳನ್ನು ಮತ್ತು ಬಿಪಿಎಫ್ 9-11 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಭಾರತೀಯ ಜನತಾ ಪಕ್ಷವು 70-80 ಸ್ಥಾನಗಳೊಂದಿಗೆ ಏಕೈಕ ಬಹುಮತ ಪಡೆದ ಪಕ್ಷವಾಗಿ ಹೊರಹೊಮ್ಮಲಿದೆ. ರೈಜೋರ್ ದಳ 1-4 ಸ್ಥಾನ, ಎಜೆಪಿ 1-2 ಸ್ಥಾನ, ಸಿಪಿಐ(ಎಂ) 0-1 ಸ್ಥಾನಗಳನ್ನು ಮತ್ತು ಐಎನ್‌ಡಿ (ಎಪಿಎಚ್‌ಎಲ್‌ಸಿ) 0-2 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
