ಉದಯವಾಹಿನಿ, ಹಜಾರಿಬಾಗ್(ಜಾರ್ಖಂಡ್): ಇಲ್ಲಿನ ಚುರ್ಚು ಬ್ಲಾಕ್‌ನ ಗೊಂಡ್ವಾರದಲ್ಲಿ ಐದು ಆನೆಗಳ ಹಿಂಡಿನ ದಾಳಿಯಿಂದ ಆರು ಮಂದಿ ಮೃತಪಟ್ಟಿದ್ದಾರೆ. ಈ ನಾಲ್ವರು ಒಂದೇ ಕುಟುಂಬದವರು. ಈ ಘಟನೆ ಬೆಳಗಿನ ಜಾವ 1 ರಿಂದ 2 ಗಂಟೆಯ ನಡುವೆ ಸಂಭವಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅರಣ್ಯ ಪ್ರದೇಶಕ್ಕೆ ತೆರಳದಂತೆ ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.
ಹಜಾರಿಬಾಗ್‌ನ ಚುರ್ಚು ಬ್ಲಾಕ್‌ನ ಗೊಂಡ್ವಾರ ಗ್ರಾಮದಲ್ಲಿ ಐದು ಆನೆಗಳು ಮನೆಯಲ್ಲಿ ಮಲಗಿದ್ದವರು ಸೇರಿ ಆರು ಜನರ ಮೇಲೆ ದಾಳಿ ಮಾಡಿವೆ. ಇದರಿಂದ ಐವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅರಣ್ಯ ಇಲಾಖೆ ಹೇಳಿದೆ.
“ಈ ಆನೆಗಳ ಹಿಂಡು ಬೊಕಾರೊ – ರಾಮ್‌ಘರ್ ಗಡಿಯನ್ನು ದಾಟುತ್ತಿತ್ತು. ಅವು ಹಜಾರಿಬಾಗ್‌ಗೆ ಪ್ರವೇಶಿಸುವ ನಿರೀಕ್ಷೆಯಿರಲಿಲ್ಲ. ತಡರಾತ್ರಿ, ಆನೆಗಳು ಚುರ್ಚು ಬ್ಲಾಕ್‌ನ ಅಂಗೋ ಗ್ರಾಮದ ಬಳಿಯ ಗೊಂಡ್ವಾರ್‌ಗೆ ತಲುಪಿ, ಆಹಾರ ಧಾನ್ಯಗಳನ್ನು ಹುಡುಕುತ್ತಾ ಭೂಯಾನ್ ಸಮುದಾಯಕ್ಕೆ ಸೇರಿದ ಮನೆಗೆ ಪ್ರವೇಶಿಸಿದವು. ಆನೆಗಳನ್ನು ನೋಡಿ ಜನರು ಹೊರಗೆ ಓಡಿ ಹೋದರು. ಆದರೆ, ಆನೆಗಳು ಒಂದೇ ಕುಟುಂಬದ ನಾಲ್ವರ ಮೇಲೆ ದಾಳಿ ಮಾಡಿದವು. ದಾಳಿಯಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಐವರೂ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಘಟನೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದು, ಶೇಖ್ ಭಿಖಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಪೂರ್ವ ಅರಣ್ಯ ವಿಭಾಗ ಡಿಎಫ್‌ಒ ವಿಕಾಸ್ ಕುಮಾರ್ ಉಜ್ವಲ್ ತಿಳಿಸಿದ್ದಾರೆ.

ಕಾಡಿನ ಕಡೆಗೆ ಹೋಗದಂತೆ ಗ್ರಾಮಸ್ಥರಿಗೆ ಮನವಿ: ಅರಣ್ಯ ಇಲಾಖೆ ಗ್ರಾಮದಲ್ಲಿ ಮೈಕ್​ ಮೂಲಕ ಕಾಡಿನ ಕಡೆಗೆ ಹೋಗದಂತೆ ಗ್ರಾಮಸ್ಥರಿಗೆ ಮನವಿ ಮಾಡಿತ್ತು. ಆದರೆ, ಗ್ರಾಮಸ್ಥರು ಮುನ್ನೆಚ್ಚರಿಕೆ ವಹಿಸಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಿಂದಾಗಿ ಈ ಘಟನೆ ಸಂಭವಿಸಿದೆ. ಘಟನೆಯ ನಂತರ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದಾರೆ. ಸರ್ಕಾರದ ನಿಬಂಧನೆಗಳ ಪ್ರಕಾರ ಮೃತರ ಕುಟುಂಬಕ್ಕೆ ಪರಿಹಾರ ನೀಡಲಾಗುತ್ತದೆ. ಗ್ರಾಮಸ್ಥರು ತಾಳ್ಮೆ ಮತ್ತು ಎಚ್ಚರಿಕೆಯಿಂದಿರಿ ಎಂದು ಗ್ರಾಮಸ್ಥರಿಗೆ ಡಿಎಫ್‌ಒ ವಿಕಾಸ್ ಕುಮಾರ್ ಉಜ್ವಲ್​ ಮನವಿ ಮಾಡಿದ್ದಾರೆ.

ಆನೆ ದಾಳಿಗೆ ಕಳೆದ ತಿಂಗಳು ಕನಿಷ್ಠ 22 ಮಂದಿ ಸಾವು: ಜನವರಿ 1 ರಿಂದ ಹಿಂಸಾತ್ಮಕವಾಗಿ ದಾಳಿ ನಡೆಸುತ್ತಿರುವ ಆನೆಗಳು ಕಳೆದ ತಿಂಗಳು ಕನಿಷ್ಠ 22 ಜನರನ್ನು ಕೊಂದಿದ್ದವು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ‘ಜಿಲ್ಲಾಡಳಿತದ ಬೆಂಬಲದೊಂದಿಗೆ ಅನೇಕ ಪ್ರಯತ್ನಗಳ ಹೊರತಾಗಿಯೂ, ಆನೆ ಸೆರೆಯಿಂದ ತಪ್ಪಿಸಿಕೊಳ್ಳುತ್ತಲೇ ಇದೆ. ಈ ಪ್ರದೇಶದಲ್ಲಿ ಮಾನವ-ವನ್ಯಜೀವಿ ಸಂಘರ್ಷವನ್ನು ನಿರ್ವಹಿಸುವುದು ಗಂಭೀರ ಸವಾಲಾಗಿ ಪರಿಣಮಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!