ಉದಯವಾಹಿನಿ, ಧನ್​ಬಾದ್​ (ಜಾರ್ಖಂಡ್​​): ಇಲ್ಲಿನ ಕತ್ರಾ ಜಿಲ್ಲೆಯ ಜಿಂಜಿ ಬೆಟ್ಟದಲ್ಲಿರುವ ಪುರಾತನ ಶಿವ ದೇಗಲ ದೈವಿಕ ನೆಲೆಯಾಗುವುದರ ಜೊತೆಗೆ 900 ಮತ್ತು 1,000 ವರ್ಷಗಳ ಹಳೆಯ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಸುಮಾರು 10ನೇ ಶತಮಾನದಲ್ಲಿ ಈ ದೇಗುಲವನ್ನು ನಿರ್ಮಾಣ ಮಾಡಲಾಗಿದೆ. 28 ಅಡಿ ಉದ್ದದ ಈ ದೇಗುಲವನ್ನು ಸಿಮೆಂಟ್​ ಸೇರಿದಂತೆ ಯಾವುದೇ ವಸ್ತುಗಳ ಬಳಕೆ ಮಾಡದೇ ಕೇವಲ ಕಲ್ಲಿನಿಂದ ನಿರ್ಮಿಸಲಾಗಿದೆ.
ಕಳಿಂಗ ದೇಗುಲದ ಮಾದರಿಯ ಶಿವಲಿಂಗ: ಈ ದೇಗುಲದ ಗರ್ಭಗುಡಿಯಲ್ಲಿರುವ ಶಿವಲಿಂಗದ ಮತ್ತೊಂದು ವಿಶೇಷತೆ ಎಂದರೆ, ಇದು ಒಡಿಶಾದ ಕಳಿಂಗ ದೇಗುಲದ ರೀತಿಯಲ್ಲಿದೆ. ಈ ದೇಗುಲದ ಹಳೆಯ ಕೆತ್ತನೆ ಮತ್ತು ರಚನಾ ಶೈಲಿಗಳು ಐತಿಹಾಸಿಕ ಮಹತ್ವವನ್ನು ಸಾರುತ್ತವೆ. ಈ ದೇಗುಲದಲ್ಲಿ ಶಿವಲಿಂಗದ ಮೂರ್ತಿ ಎರಡು ಅಡಿ ಎತ್ತರವಿದೆ.

ಬೆಸೆದಿರುವ ನಂಬಿಕೆ: ಈ ದೇಗುಲದ ಅರ್ಚಕರು ಹೇಳುವಂತೆ, ಈ ದೇಗುಲವನ್ನು ಒಂದೇ ರಾತ್ರಿಯಲ್ಲಿ ನಿರ್ಮಾಣ ಮಾಡುವ ಗುರಿಯೊಂದಿಗೆ ನಿರ್ಮಾಣ ಮಾಡಲಾಗಿದೆ. ಮುಂಜಾನೆಯ ಹಿಮವಿದ್ದ ಕಾರಣ ದೇಗುಲದ ಶಿಖರವನ್ನು ನಿರ್ಮಾಣ ಮಾಡಲಾಗಿಲ್ಲ. ದೇಗುಲವನ್ನು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲಾಗಿದ್ದು, ಯಾವುದೇ ವಸ್ತುಗಳನ್ನು ಇದಕ್ಕೆ ಬಳಕೆ ಮಾಡಿಲ್ಲ.
ದೇಗುಲದ ಆವರಣದಲ್ಲಿರುವ ಕೊಳ ಮತ್ತು ಬಾವಿ: ಈ ದೇಗುಲದ ಆವರಣದಲ್ಲಿ ಒಂದು ಕೊಳ ಮತ್ತು ಬಾವಿ ಇದ್ದು, ಅದು ಇಂದಿಗೂ ಕಾಣಬಹುದಾಗಿದೆ. ದೇಗುಲದಲ್ಲಿ ಭಕ್ತರು ಕುಡಿಯುವ ನೀರಿಗಾಗಿ ಈ ಬಾವಿಯ ನೀರನ್ನು ಇಂದಿಗೂ ಬಳಕೆ ಮಾಡುತ್ತಿದ್ದಾರೆ. ಕೊಳದ ನೀರನ್ನು ಸ್ನಾನದಂತಹ ಚಟುವಟಿಕೆಗೆ ಬಳಕೆ ಮಾಡಲಗುತ್ತಿದೆ. ಈ ದೇಗುಲದ ಶಿವನ ಬಗ್ಗೆ ಹೆಚ್ಚಿನ ನಂಬಿಕೆ ಮತ್ತು ಭಕ್ತಿ ಹೊಂದಿದ್ದು, ಪಶ್ಚಿಮ ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶದಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ದೇಗುಲ ರಕ್ಷಣೆಗೆ ಹೆಚ್ಚಿದ ಒತ್ತಾಯ: ಅತ್ಯಂತ ಪುರಾತನವಾದ ಈ ದೇಗುಲವನ್ನು ಭಾರತೀಯ ಪುರಾತತ್ವ ಸಮೀಕ್ಷೆಗೆ ಒಳಪಡಿಸಲಾಗಿದ್ದು, ದೇಗುಲದ ಪರೀಕ್ಷೆ ನಡೆಸಿ, ವರದಿಯನ್ನು ತಯಾರಿಸಲಾಗಿದೆ. ದೇಗುಲವೂ ಕಲ್ಲಿನ ರಚನೆ ಹೊಂದಿದ್ದು, ವರ್ಷಗಳು ಉರುಳಿದಂತೆ ಈ ಕಲ್ಲುಗಳು ಸಡಿಲಗೊಂಡು ಬೀಳುತ್ತಿವೆ. ಜೊತೆಗೆ ನೈಸರ್ಗಿಕ ವಿಪತ್ತುಗಳು ಮತ್ತು ಸುತ್ತಲ ಗಣಿಗಾರಿಕೆಗಳು ದೇಗುಲಕ್ಕೆ ಹಾನಿ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಇಲಾಖೆಯು ಇದರ ರಕ್ಷಣೆಗೆ ಮುಂದಾಗಿ, ಕಾಪಾಡಬೇಕಿದೆ. ದೇಗುಲವನ್ನು ಸುರಕ್ಷಿತಗೊಳಿಸುವ ಮೂಲಕ ದೇಗುಲವನ್ನು ಪ್ರವಾಸಿಗರ ಆಕರ್ಷಣಿಯ ತಾಣವಾಗಿ ರೂಪಿಸಬೇಕಿದೆ ಎಂದು ಬುದ ಬಾಬಾ ಮಂದಿರ ಸೇವಾ ಸಮಿತಿ ಟ್ರಸ್ಟ್​ನ ಅಧ್ಯಕ್ಷರಾಗಿರುವ ಲಖನ್​ ಪ್ರಸಾದ್​ ಮಹತೊ ಅವರ ಒತ್ತಾಯವಾಗಿದೆ.
ಆಡಳಿತಾತ್ಮಕ ಕ್ರಮ: ಜಿಲ್ಲಾ ಪ್ರವಾಸ ಪ್ರೋತ್ಸಾಹ ಮಂಡಳಿಗೆ ದೇಗುಲ ರಕ್ಷಣೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಉಪ ಆಯುಕ್ತರಾದ ಆದಿತ್ಯ ರಂಜನ್​ ತಿಳಿಸಿದ್ದಾರೆ. ಈ ಪ್ರಸ್ತಾವನೆ ಅನುಮೋದನೆ ಬಳಿಕ ರಾಜ್ಯ ಸರ್ಕಾರ ಇದನ್ನು ಪ್ರವಾಸಿ ಸ್ಥಳ ಎಂದು ಘೋಷಿಸಲಿದೆ. ಈ ಪ್ರಸ್ತಾವನೆಯನ್ನು ಭಾರತೀಯ ಪುರಾತತ್ವ ಇಲಾಖೆಗೆ ನೀಡಿ, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಪುರಾತತ್ವ ಇಲಾಖೆಯ ಅಂತಿಮ ವರದಿ ಬಂದ ನಂತರ, ದೇವಾಲಯದ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಮಗ್ರ ಯೋಜನೆ ಅಭಿವೃದ್ಧಿಪಡಿಸಲು ಭಾರತ ಸರ್ಕಾರಕ್ಕೆ ವಿವರವಾದ ಪ್ರಸ್ತಾವನೆ ಕಳುಹಿಸಲಾಗುವುದು

 

Leave a Reply

Your email address will not be published. Required fields are marked *

error: Content is protected !!