ಉದಯವಾಹಿನಿ, ನ್ಯೂಯಾರ್ಕ್: ಸೋಷಿಯಲ್‌ ಮೀಡಿಯಾ ಸ್ಟಂಟ್‌ಗಾಗಿ ವಿಷಕಾರಿ ‘ಡೆವಿಲ್‌ ಕಾರ್ಬ್‌’ (ಒಂದು ಪ್ರಭೇದದ ಏಡಿ) ತಿಂದು ಫುಡ್‌ ಇನ್ಫ್ಲುಯೆನ್ಸರ್‌ ದುರಂತ ಸಾವಿಗೀಡಾಗಿರುವ ಘಟನೆ ನಡೆದಿದೆ.
ಎಮ್ಮಾ ಅಮಿತ್‌ ಮೃತ ಮಹಿಳೆ. ಈಕೆ ತನ್ನ ಸ್ನೇಹಿತರೊಟ್ಟಿಗೆ ಪಲವಾನ್‌ನ ಪೋರ್ಟೊ ಪ್ರಿನ್ಸೆಸಾ ಬಳಿಯ ಮ್ಯಾಂಗ್ರೋವ್‌ ಕಾಡಿನಲ್ಲಿ ಚಿಪ್ಪು ಮೀನುಗಳನ್ನು ಹಿಡಿದಿದ್ದರು. ಎಮ್ಮಾ ಅವರು ಮೀನುಗಳನ್ನು ಬೇಯಿಸಿ ತಿನ್ನುವ ವೀಡಿಯೋವನ್ನು ಟಿಕ್‌ಟಾಕ್‌ ಮತ್ತು ಫೇಸ್‌ಬುಕ್‌ಗಾಗಿ ಚಿತ್ರೀಕರಿಸಿದ್ದರು.
ಮರುದಿನ ಏಡಿಯ ವಿಷದಿಂದ ಆಕೆ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಆಕೆ ಪ್ರಜ್ಞೆ ಕಳೆದುಕೊಂಡಾಗ ಅವಳ ತುಟಿಗಳು ಕಡು ನೀಲಿ ಬಣ್ಣಕ್ಕೆ ತಿರುಗಿದವು. ಆರೋಗ್ಯ ಸ್ಥಿತಿ ಹದಗೆಟ್ಟು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಮಹಿಳೆ ಮೃತಪಟ್ಟಿದ್ದಾರೆ.
ಈ ದುರಂತ ಘಟನೆಯ ನಂತರ ಲುಜ್ವಿಮಿಂಡಾ ಗ್ರಾಮದ ಮುಖ್ಯಸ್ಥೆ ಲ್ಯಾಡಿ ಗೆಮಾಂಗ್, ಪೋರ್ಟೊ ಪ್ರಿನ್ಸೆಸಾ ನಿವಾಸಿಗಳಿಗೆ ಈ ಏಡಿಗಳ ಬಗ್ಗೆ ತುರ್ತು ಎಚ್ಚರಿಕೆ ನೀಡಿದ್ದಾರೆ. ಈ ಡೆವಿಲ್‌ ಕಾರ್ಬ್‌ಗಳನ್ನು ತಿನ್ನಬೇಡಿ. ಈ ಏಡಿಗಳನ್ನು ಸೇವಿಸಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಗೆಮಾಂಗ್‌ ಸಲಹೆ ನೀಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!