ಉದಯವಾಹಿನಿ, ವಾಷಿಂಗ್ಟನ್, : ಪೊಲೀಸ್ ಅಧಿಕಾರಿಯೊಬ್ಬರ ಬೇಜವಾಬ್ದಾರಿನದಿಂದ ಅಪಘಾತದಲ್ಲಿ (accident in US) ಮೃತಪಟ್ಟಿದ್ದ ಭಾರತೀಯ ಮೂಲದ ಯುವತಿಯೊಬ್ಬಳ ಕುಟುಂಬಕ್ಕೆ 262 ಕೋಟಿ ರೂ. ಪರಿಹಾರ ನೀಡುವಂತೆ ಆದೇಶಿಸಲಾಗಿದೆ. 2023ರ ಜನವರಿಯಲ್ಲಿ ಈ ಘಟನೆ ನಡೆದಿತ್ತು. ಪೊಲೀಸ್ ಅಧಿಕಾರಿಯೊಬ್ಬರ ಅತಿ ವೇಗದ ಚಾಲನೆಯಿಂದ ಡಿಕ್ಕಿ ಹೊಡೆದ ಪರಿಣಾಮ ಭಾರತೀಯ ಮೂಲದ 23 ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಮೃತಪಟ್ಟಿದ್ದರು. ಈ ಸಂಬಂಧ ಆಕೆಯ ಕುಟುಂಬವು ಮೊಕದ್ದಮೆ ದಾಖಲಿಸಿದ್ದರು. ಇದೀಗ ಸಿಯಾಟಲ್ ಅಧಿಕಾರಿಗಳು 29 ಮಿಲಿಯನ್ ಅಮೆರಿಕನ್ ಡಾಲರ್‌ (ಸುಮಾರು ರೂ. 262 ಕೋಟಿ) ಪಾವತಿಸಲು ಒಪ್ಪಿಕೊಂಡಿದ್ದಾರೆ.

ನಗರ ಆಡಳಿತ ಹಾಗೂ ಕಳೆದ ವರ್ಷ ವಜಾಗೊಂಡ ಮಾಜಿ ಸಿಯಾಟಲ್ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ವಿರುದ್ಧ 2024ರಲ್ಲಿ ದಾಖಲಿಸಲಾಗಿದ್ದ 110 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಮೊಕದ್ದಮೆಯನ್ನು ಈ ಒಪ್ಪಂದದ ಮೂಲಕ ಅಂತ್ಯಗೊಳಿಸಲಾಗಿದೆ. ಈ ಪರಿಹಾರ ಮೊತ್ತದಲ್ಲಿ ಸುಮಾರು 20 ಮಿಲಿಯನ್ ಅಮೆರಿಕನ್ ಡಾಲರ್ ನಗರ ಆಡಳಿತದ ವಿಮಾ ಪಾಲಿಸಿಯಿಂದ ಭರಿಸಲಾಗುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *

error: Content is protected !!