ಉದಯವಾಹಿನಿ, ಬರ್ಲಿನ್‌, : ಬರ್ತ್ ಡೇಯಂದು ಅಥವಾ ಪ್ರಪೋಸ್ ಡೇಯಂದು ಸಂಗಾತಿಗೆ ವಿಶೇಷ ಉಡುಗೊರೆ ನೀಡಲು ಹೆಚ್ಚಿನವರು ಬಯಸುತ್ತಾರೆ. ಆದರೆ ಕೆಲವೊಮ್ಮೆ ಮಾಡಿದ ಪ್ಲ್ಯಾನ್‌ಗಳು ಕೈಕೊಟ್ಟು ಬೇಸರ ಮಾಡಿಕೊಂಡವರು ಹಲವರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಜರ್ಮನಿಯ ಯುವಕನೊಬ್ಬ ಪ್ರೀತಿಸಿದವಳಿಗೆ ವಾರ್ಷಿಕೋತ್ಸವದ ಉಡುಗೊರೆಯಾಗಿ ನೀಡಲು ತಂದಿದ್ದ ಸುಮಾರು 1.8 ಲಕ್ಷ ರುಪಾಯಿ ಮೌಲ್ಯದ ಡುಗೊರೆ ಆತನ ಕಣ್ಣ ಮುಂದೆಯೇ ಆಕಾಶಕ್ಕೆ ಹಾರಿ ಹೋದ ಘಟನೆ ನಡೆದಿದೆ. ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜರ್ಮನ್ ಯುವಕನೊಬ್ಬ ತನ್ನ ಗೆಳತಿಗೆ ಅಚ್ಚರಿಯ ಉಡುಗೊರೆ ನೀಡಬೇಕೆಂದು ಬಯಸಿದ್ದನು. ಆದರೆ ಈ ಪ್ಲ್ಯಾನ್‌ ಅನಿರೀಕ್ಷಿತ ತಿರುವು ಪಡೆದುಕೊಂಡಿತು. ಯುವಕನು ಉಡುಗೊರೆಯ ಪೆಟ್ಟಿಗೆಯೊಳಗೆ ಬಲೂನ್ ಅನ್ನು ಇಟ್ಟಿದ್ದ. ಅದಕ್ಕೆ ನಗದು ನೋಟುಗಳನ್ನು ಸರಪಳಿಯಂತೆ ಜೋಡಿಸಿದ್ದ. ಆ ಬಲೂನ್‌ಗಳಿಗೆ ಆತ ತನ್ನ ಇಡೀ ತಿಂಗಳ ಸಂಬಳ 1.8 ಲಕ್ಷ ರುಪಾಯಿ ಜೋಡಿಸಿದ್ದ. ಆದರೆ ಇದನ್ನು ಅರಿಯದ ಗೆಳತಿ ಬಲೂನ್ ಅನ್ನು ಹಾರಿಸಿ ಬಿಟ್ಟಿದ್ದಾಳೆ.

Leave a Reply

Your email address will not be published. Required fields are marked *

error: Content is protected !!