ಉದಯವಾಹಿನಿ, ಬಾಗೇಪಲ್ಲಿ: ಪಟ್ಟಣದ ಜನತೆಗೆ ಸಕಾಲಕ್ಕೆ ಶುದ್ದ ಕುಡಿಯುವ ನೀರು ಪೂರೈಸಬೇಕಾಗಿರುವ ಪುರಸಭೆ ಆಡಳಿತ ಯಂತ್ರಾಂಗ ತ್ಯಾಜಮಿಶ್ರ ಕಲುಷಿತ ನೀರು ಸರಬರಾಜು ಮಾಡಿ ಜನರ
ಆರೋಗ್ಯದೊಂದಿಗೆ ಚಲ್ಲಾಟವಾಡುತ್ತಿದೆ ಎಂದು ಪುರಸಭೆ ಆಧಿಕಾರಿಗಳ ವಿರುದ್ದ ಪಟ್ಟಣದ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಗೇಪಲ್ಲಿ ಪಟ್ಟಣದ ಹೃದಯ ಭಾಗದಲ್ಲಿರುವ 15ನೇವಾರ್ಡಿನಲ್ಲಿ 200ಕ್ಕೂ ಹೆಚ್ಚು ಕುಟುಂಬ ಗಳಿದ್ದು ಕೂಲಿ ಕಾರ್ಮಿಕರು, ಬಡವರೇ ಹೆಚ್ಚಿನ ಪ್ರಮಾಣದಲ್ಲಿ ವಾಸವಿರುವ ಪ್ರದೇಶವಾಗಿರುತ್ತದೆ. ಪುರಸಭೆವತಿಯಿಂದ ವಾರಕ್ಕೊಮ್ಮೆ ಪೈಪ್ ಲೈನ್ ಮೂಲಕ ಸರಬರಾಜು ಮಾಡುವ ನೀರನ್ನೆ ಈ ಭಾಗದ ಜನತೆ ಆಹಾರ ಸಿದ್ದಪಡಿಸಲು, ಕುಡಿಯಲು ಹಾಗೂ ನಿತ್ಯ ಬಳಕೆಗೆ ಉಪಯೋಗಿಸಿ ಕೊಳ್ಳುತ್ತಾರೆ. ಏನಾದರೂ ಅಪಾಯ ಆದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ನೀರಿಗಾಗಿ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಪುರಸಭೆ ಸರಬರಾಜು ಮಾಡುವ ನೀರನ್ನು ಕಡ್ಡಾಯ ಬಳಕೆ ಮಾಡಿಕೊಳ್ಳುವುದು ಈ ವಾರ್ಡಿನ ಜನತೆಗೆ ಅನಿವಾರ್ಯವಾಗಿದೆ. ಅದರೇ ಕಳೆದ ನಾಲೈದು ದಿನಗಳಿಂದ ಪುರಸಭೆಯಿಂದ ಸರಬರಾಜು ಮಾಡುತ್ತಿರುವ ನೀರಿನಲ್ಲಿ ತ್ಯಾಜ್ಯ ಮಿಶ್ರಣಗೊಂಡು ಕಲುಷಿತವಾಗಿ ಸಾರ್ವಜನಿಕರ ಬಳಕೆ ಯೋಗ್ಯವಿಲ್ಲದ ಕಲುಷಿತ ನೀರನ್ನೆ ಮನೆಗಳಿಗೆ ಸರಬರಾಜು ಮಾಡಿರುತ್ತಾರೆ ಎಂದು ದೂರಿದರು.
